8/3/2016 ರಂದು ಮಳವೂರು ಪಂಚಾಯತ್ ವತಿಯಿಂದ ಕರಂಬಾರು ಶಾಲೆಯಲ್ಲಿ ನಾಲ್ಕು ಶಾಲೆಯ ಮಕ್ಕಳಿಂದ ಗ್ರಾಮ ಸಭೆಯು ನಡೆಯಿತು. 150 ಮಕ್ಕಳು ಜಾಥಾದಲ್ಲಿ ಭಾಗವಹಿಸಿದರು. ಮದ್ಯ ಮುಕ್ತ ಗ್ರಾಮ ಮಾಡಬೇಕೆಂಬ ಘೋಷಣೆಯೊಂದಿಗೆ ಈ ಜಾಥಾದ ಉಸ್ತುವಾರಿಯನ್ನು ಶ್ರೀಮತಿ ನಳಿನಿ.ಜಿ. ಶೆಟ್ಟಿ ಹಾಗೂ ಸಮಾಜ ಸೇವಕಿ ನಂದಾ ಪಾಯಸ್‍ರವರು ವಹಿಸಿಕೊಂಡರು. ಪೋಕ್ಸೊ ಕಾಯ್ದೆಯ ಬಗ್ಗೆ ಚೈಲ್ಡ್ ಲೈನ್ ವತಿಯಿಂದ ಮಕ್ಕಳಿಗೆ ಮಾಹಿತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸಹೋದಯದ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ ಜಿ.ಶೆಟ್ಟಿ ಭಾಗವಹಿಸಿದರು.
8/3/2016 ರಂದು ಮಳವೂರು ಗ್ರಾಮ ಪಂಚಾಯತ್ ವತಿಯಿಂದ ನಡೆದ 2015-2016ನೇಯ ಸಾಲಿನ ವಿಶೇಷÀ ಮಹಿಳಾ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಹಿಳೆಯರ ಹಕ್ಕುಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಇವರು ಉತ್ತಮ ರೀತಿಯ ಸಲಹೆಗಳನ್ನು ನೀಡಿದರು. ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸಹಾಯಕಿ ಮಹಿಳೆಯರಿಗೆ ಸಂಬಂಧಪಟ್ಟ ಕಾಯ್ದೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದರು.