ದಿನಾಂಕ 28.07.2024 ರಂದು ಸಹೋದಯ ಸಭಾಂಗಣದಲ್ಲಿ sಸಹೋದಯ ಬೆಥನಿ ಸೇವಾಕೇಂದ್ರ ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ವಿಶ್ವಮಾನವ ಕಳ್ಳಸಾಗಣಿಕೆ ತಡೆ ದಿನದ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಸಮಯ 11.30ಕ್ಕೆ ಏರ್ಪಡಿಸಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ತದನಂತರ ಡಾ! ಸರಿತಾ ಡಿ’ಸೋಜಾ ಮುಖ್ಯಸ್ಥೆ ಪಿ.ಜಿ ಇಲಾಖೆ ಕ್ರಿಮಿನೋಲೊಜಿ ಮತ್ತು ನ್ಯಾಯ ವಿಜ್ಞಾನ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಹಿಳೆ, ಸಂರಕ್ಷಣೆ ಮತ್ತು ಕಾನೂನು ಎಂಬ ವಿಷಯವನ್ನು ಆಧರಿಸಿ ಮಹಿಳೆಯರಿಗೆ ಸಮಾಜದಲ್ಲಿ ಇರುವ ಸ್ಥಾನಮಾನವನ್ನು, ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡಬಹುದು ಹಾಗೂ ಸಮಾಜದಲ್ಲಿ ಇರುವ ಹಕ್ಕುಗಳು ಮತ್ತು ಅದನ್ನು ಕಾನೂನಿನ ಅಡಿಯಲ್ಲಿ ಯಾವ ರೀತಿಯಲ್ಲಿ, ಹೇಗೆ ಬಳಸಿಕೊಳ್ಳುವುದೆಂಬುದರ ಬಗ್ಗೆ ಹಾಗೂ ಈ ಕಾನೂನನ್ನು ಉಲ್ಲಂಘಿಸಿದರೆ ಏನು ಶಿಕ್ಷೆಯಾಗುತ್ತದೆ ಎಂಬುದರ ಬಗ್ಗೆ ಕೆಲವೊಂದು ಚರ್ಚೆಗಳ ಮುಖಾಂತರ ಮಾಹಿತಿ ನೀಡುತ್ತಾ ಇನ್ನು ಜಾರಿಗೆಗೊಂಡಿರುವ ಹೊಸ ಕಾನೂನುಗಳ ಬಗ್ಗೆ, ಅದರೊಂದಿಗೆ ಉದಾಹರಣೆ ಮುಖಾಂತರ ಮಹಿಳಾ ಕೇಸುಗಳ ಬಗ್ಗೆ ಚರ್ಚಿಸಿ ಅದನ್ನು ಯಾವ ರಿತಿಯಲ್ಲಿ ಪರಿಹಾರಕ್ಕೆ ತೆಗೆದು ಕೊಂಡು ಹೋಗಬಹುದು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾಕೇಂದ್ರದ ಸಂಯೋಜಕರಾದ ಭ!ಲೀನಾ ಡಿ.ಕೋಸ್ಟ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮ ಎಲ್, ಸಂಸ್ಥೆಯ ಕಾರ್ಯಕರ್ತೆಯರು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
ಸ್ವಾಗತ ಶ್ರೀಮತಿ ಸುನೀತಾ, ನಿರೂಪಣೆ ಶ್ರೀಮತಿ ಲವೀನಾ ವೇಗಸ್, ಸಂಪನ್ಮೂಲ ವ್ಯಕ್ತಿಯ ಪರಿಚಯ ಭ!ಲೀನಾ ಡಿ’ಕೋಸ್ಟ, ಶ್ರೀಮತಿ ಶೋಭಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.