ದಿನಾಂಕ 27.01.2025 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ರೋಸಾ ಮಿಸ್ತಿಕಾ ಪ್ರೌಢ ಶಾಲೆ ಇಲ್ಲಿನ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆ ಎಂದರೇನು? ಈ ಕೃತ್ಯವನ್ನು ಏತಕ್ಕಾಗಿ ನಡೆಸುತ್ತಾರೆ ಇದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ಸಣ್ಣ ವಿಡಿಯೋ ಚಿತ್ರಣದ ಮೂಲಕ ತಿಳಿಸಿ ಇದರಿಂದ ನಾವು ಯಾವ ರೀತಿಯಲ್ಲಿ ಜಾಗೃತರಾಗಬೇಕು ಹಾಗೂ ಯಾರನ್ನು ಸಂಪರ್ಕಿಸಬೇಕೆಂಬುದರ ಕುರಿತು ಮಾಹಿತಿಯನ್ನು ನೀಡಿದರು.
ತದನಂತರ ತರಗತಿವಾರು ಮೂವರು ಹೆಣ್ಣು ಮಕ್ಕಳನ್ನು ಮತ್ತು ಮೂವರು ಗಂಡು ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ತಡೆ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಈ ಸಮಿತಿಯ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಮುಂದಿನ ಸಭೆಯಲ್ಲಿ ಈ ಕುರಿತು ಯಾವುದೇ ಮಾಹಿತಿಗಳು ತಮಗೆ ಸಿಕ್ಕಿದಲ್ಲಿ ಯಾವ ರೀತಿಯಲ್ಲಿ ಬಗೆಹರಿಸಬಹುದೆಂಬುದರ ಹಾಗೂ ಹೇಗೆ ಕ್ರಮವನ್ನು ಕೈಗೊಳ್ಳುವುದು ಮತ್ತು ಸಭೆಯನ್ನು ಮುಂದುವರಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ರೆನ್ನಿಲ್ಲಾ ರೋಶನಿ , ಶಾಲಾ ಶಿಕ್ಷಕ ವೃಂದದವರು ಮೊದಲಾದವರು ಭಾಗವಹಿಸಿದ್ದರು.