ಸಹೋದಯ ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ), ಸಹೋದಯ ಬೆಥನಿ ಸೇವಾ ಕೇಂದ್ರ ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟ ಮಂಗಳೂರು ಇವರ ಆಶ್ರಯದಲ್ಲಿ ದಿನಾಂಕ 24.09.2024ರಂದು ಶ್ರೀಮತಿ ನಳಿನಿ ಜಿ. ಶೆಟ್ಟಿ ಇವರಿಗೆ ಕೃತಜ್ಞಾತಾಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಸಂಯೋಜಕರಾದ ಭ! ಲೀನಾ ಡಿ’ ಕೋಸ್ಟ ಇವರ ಪ್ರಾರ್ಥನಾವಿಧಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ತದನಂತರ ಸಹೋದಯ ಸಂಸ್ಥೆಯಲ್ಲಿ ತಮ್ಮ 10 ವರ್ಷಗಳ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶ್ರೀಮತಿ ನಳಿನಿ ಇವರಿಗೆ ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ/ ಸಹೋದಯ ಬೆಥನಿ ಸೇವಾ ಕೇಂದ್ರದ ನಿರ್ದೇಶಕರಾದ ಭ! ಶಾಂತಿ ಪ್ರೀಯ ಇವರು ಅವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ಮುಂದಿನ ಜೀವನ ಉತ್ತಮವಾಗಿರಲಿಯೆಂದು ಶುಭಹಾರೈಸಿ ಸನ್ಮಾನ ಪತ್ರ, ಶಾಲು ಹೊದಿಸಿ, ಫಲಪುಷ್ಪ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು.
ನಂತರ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಸದಸ್ಯರು ಶ್ರೀಮತಿ ನಳಿನಿ ಇವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಹಾಗೇ ಶ್ರೀಮತಿ ನಳಿನಿ ಇವರು ತಮಗೆ 10 ವರ್ಷಗಳ ಕಾಲ ಸಹೋದಯ ಸಂಸ್ಥೆಯಲ್ಲಿ ಅದಂತಹ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಭ! ಶಾಂತಿ ಪ್ರೀಯ ಃ.S, ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ/ ಸಹೋದಯ ಬೆಥನಿ ಸೇವಾ ಕೇಂದ್ರದ ನಿರ್ದೇಶಕರು, ಭ! ಶುಭ BS. ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ, ಭ! ಸಿಲ್ವಿ ರೊಡ್ರಿಗಸ್ BS, ಬೆಥನಿ ಜನರಲೇಟಿನ ಸುಪೀರಿಯರ್, ಶ್ರೀಮತಿ ನಳಿನಿ ಜಿ. ಶೆಟ್ಟಿ ಮುಖ್ಯ ಅತಿಥಿ (ಕಾರ್ಯಕರ್ತೆ, ಸಹೋದಯ ಬೆಥನಿ ಸೇವಾಕೇಂದ್ರ), ಭ! ಲೀನಾ ಡಿ’ಕೋಸ್ಟ, ಸಂಯೋಜಕರು ಸಹೋದಯ ಬೆಥನಿ ಸೇವಾಕೇಂದ್ರ, ಶ್ರೀಮತಿ ಪ್ರೇಮಾ ಎಲ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿರೂಪಣೆ ಶ್ರೀಮತಿ ಸುನಿತ, ಸ್ವಾಗತ ಶ್ರೀಮತಿ ರೆನ್ನಿಲ್ಲಾ ರೋಶ್ನಿ ಹಾಗೂ ಶ್ರೀಮತಿ ಶೋಭಾ ಇವರ ಧನ್ಯವಾದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.