ಸಹೋದಯ ಬೆಥನಿ ಸೇವಾ ಕೇಂದ್ರದಲ್ಲಿ ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮೊದಲಿU,É ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ ಕೋಸ್ಟ ಇವರು ಅತಿಥಿ ಗಣ್ಯರನ್ನು ವೇದಿಕೆಗೆ ಪ್ರೀತಿಯಿಂದ ಬರಮಾಡಿಕೊಂಡರು ಬಳಿಕ, ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಹೋದಯದ ಸಿಬ್ಬಂದಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಮದರ್ ಮಾರ್ಥಾ ಸಂಘದ ಕಾರ್ಯದರ್ಶಿ ಶ್ರೀಮತಿ ಲವಿನಾ ವೇಗಸ್ ಇವರು ಸ್ವಾಗತ ಭಾಷಣ ಮಾಡಿದರು. ಸ್ತ್ರೀ ಸಬಲೀಕರಣ ಫಲಕವನ್ನು ಅನಾವರಣಗೊಳಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಯೋಜಕರಾದ ಭ| ಲೀನಾ ಡಿ ಕೊಸ್ಟ ಇವರು ಅತಿಥಿ ಗಣ್ಯರ ಕಿರುಪರಿಚಯವನ್ನು ಮಾಡಿದರು. ತದನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಫಿಲೋಮಿನಾ ಲೋಬೋ ನಿವೃತ್ತ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ. ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಮಹಿಳೆಯಾಗುವುದೆಂದರೆ ¨ಹಳ ಹೆಮ್ಮೆಯ ವಿಷಯ. ನಮಗೂ ಬದುಕುವ ಛಲ, ಶಿಕ್ಷಣ ಮತ್ತು ಬುಧಿವಂತಿಕೆ ಇದೆ. ಇವುಗಳನ್ನು ಸರಿಯಾಗಿ ಸದುಪಯೋಗಿಸಿಕೊಂಡು ಮುಂದೆ ಬರಬೇಕು. ನಮ್ಮ ಜೀವನದಲ್ಲಿ ಒಂದು ಗುರಿ ಇರಬೇಕು ಮತ್ತು ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕು ಆಗ ಬದುಕು ಹಸನಾಗುತ್ತದೆ ಎಂಬುದನ್ನು ಒಂದು ಸಣ್ಣ ಕಥೆಯ ಮೂಲಕ ಮಹಿಳಾ ದಿನಾಚರಣೆಯ ಉತ್ತಮ ಸಂದೇಶವನ್ನು ನೀಡಿದರು.
ತದನಂತರ ಶ್ರೀಮತಿ ಐಡಾ ಪಿಂಟೋ ( ವ್ಯವಸ್ಥಾಪಕರು, ಎಂ ಸಿ ಸಿ ಬ್ಯಾಂಕ್ ಕಂಕನಾಡಿ ಶಾಖೆ ಮಂಗಳೂರು) ಇವರು ಒಬ್ಬ ಮಹಿಳೆ ತಂದೆ ತಾಯಿಗೆ ಮಗಳಾಗಿ , ಪತಿಗೆ ಪತ್ನಿಯಾಗಿ, ಮಕ್ಕಳಿಗೆ ತಾಯಿಯಾಗಿ ಅವರ ಎಲ್ಲಾ ಸಾಧನೆಗಳಿಗೆ ಸ್ಫೂರ್ತಿಯಾಗಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯವನ್ನು ಹಾರೈಸಿದರು. ನಮ್ಮ ತಾಯಿಯೇ ನಮಗೆ ಆದರ್ಶ ಅವಳೇ ಮೊದಲ ಗುರು. ಒಬ್ಬ ಹೆಣ್ಣು ಮಾತ್ರ ಇನ್ನೊಂದು ಜೀವಕ್ಕೆ ಉಸಿರು ನೀಡಬಲ್ಲಳು. ಈಗ ಮಹಿಳೆಯರು ತಮ್ಮ ಶಕ್ತಿ ಏನು ಎಂಬುದನ್ನು ಸಾಭೀತುಪಡಿಸುತ್ತಿದ್ದಾರೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಹಾಗೆಯೇ ಇನ್ನೂ ಸಾಧನೆಯ ಉತ್ತುಂಗ ಶಿಖರಕ್ಕೆ ಏರಲ್ಲೆಂದು ಹಾರೈಸಿದರು.
ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎಂಬ ಮಾತಿನಂತೆ ಗಂಡು- ಹೆಣ್ಣು ಎಂಬ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ನೀಡಬೇಕು ಅದರೊಂದಿಗೆ ಸಂಸ್ಕಾರ ಕಲಿಸಿ ಕೊಡಬೇಕು. ಮಹಿಳೆಯೂ ಸ್ವಾವಲಂಬಿಯಾಗಿ ಹೊರಹೊಮ್ಮಿ ತನ್ನಂತೆಯೇ ಇನ್ನೋರ್ವ ಮಹಿಳೆಗೆ ಮಾದರಿಯಾಗಬೇಕೆಂದು ಬೆಥನಿ ಕಾನ್ವೆಂಟ್ ನ ಮುಖ್ಯಸ್ತರಾದ ಭ| ಶುಭ ಬಿ. ಎಸ್ ರವರು ತಿಳಿಸಿದರು.
ಅಲನೋನ್ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಜಾನೇಟ್ ಹಾಗೂ ಶ್ರೀಮತಿ ಸಮಿತ ಇವರು ಅಲನೋನ್ ಎಂದರೇನು? ಅದರ ಉದ್ದೇಶವೇನು? ಹಾಗೂ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹೋದಯ ಕಲಿಕಾ ಸಾಮಥ್ರ್ಯ ಸ್ಪರ್ಧಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸಿ, ಅತಿಥಿ ಗಣ್ಯರು ಪ್ರಮಾಣ ಪತ್ರ ನೀಡಿದರು, ಬಳಿಕ ಮಕ್ಕಳು , ತಮ್ಮ ಅನುಭವವನ್ನು ಹಂಚಿದರು ಹಾಗೂ 6 ತಿಂಗಳ ಹೊಲಿಗೆ ತರಬೇತಿ ಹಾಗೂ ಕೈಕಸೂತಿ ತರಬೇತಿಯನ್ನು ಪೂರ್ಣಗೊಳಿಸಿÀದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.ಮಹಿಳಾ ದಿನದ ಪ್ರಯುಕ್ತ - ಶ್ರೀಮತಿ ಸೆಲ್ವಿ ದೊರೆರಾಜ್ ಇವರ ಕೆಲಸದ ನಿಷ್ಠೆ, ಪ್ರಾಮಾಣಿಕತೆ, ಸಮಯ ಪಾಲನೆ ಮೊಲಾದವುಗಳನ್ನು ಗುರುತಿಸಿ ಇವರಿಗೆ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ , ಫಲ-ಪುಷ್ಪವನ್ನು ನೀಡಿ ಸನ್ಮಾನಿಸಲಾಯಿತು.
ಮಹಿಳೆಯರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು
ಹೊಲಿಗೆ ತರಬೇತಿ ಹಾಗೂ ಕೈ ಕಸೂತಿ ತರಬೇತಿಯ ವಿದ್ಯಾರ್ಥಿಗಳು ನೃತ್ಯದ ಮೂಲಕ ಹಾಗೂ ಮದರ್ ಮಾರ್ಥ ಸಂಘದ ಸದಸ್ಯರ ಮಹಿಳಾ ದಿನಾಚರಣೆಯ ವಿಶೇಷ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ವಾಣಿ ನಾಯಕ್ , ಶ್ರೀಮತಿ ಝೀನಾ- ಧನ್ಯವಾದ ಸಮರ್ಪಿಸಿದರು. ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.