ದಿನಾಂಕ 15.01.2025 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಹಾಗೂ ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿನಿಯರ ವತಿಯಿಂದ ರೋಸಮಿಸ್ತಿಕ ಹಿ.ಪ್ರಾ.ಶಾಲೆ ಕಿನ್ನಕಂಬ್ಳ ಇಲ್ಲಿನ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಮತ್ತು ಅದರ ಪರಿಪಾಲನೆಯ ಹಾಗೂ ಒತ್ತಡದ ಕುರಿತು ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕುಮಾರಿ ನೀಕ್ಷಾ ಮತ್ತು ಕುಮಾರಿ ಯಶಸ್ವಿನಿ (ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿಗಳು) ಇವರು ಸಮಫನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಮಯ ಪರಿಪಾಲನೆ ಹಾಗೂ ಇದರಿಂದ ಮಕ್ಕಳಿಗೆ ಆಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು ತದನಂತರ ಪರೀಕ್ಷೆಯ ಒತ್ತಡದಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮವನ್ನು ಯಾವ ರೀತಿಯಲ್ಲಿ ತಡೆಹಿಡಿಯಬಹುದು ಎಂಬುದಾಗಿ ಹಾಗೂ ಮಕ್ಕಳಿಗೆ ಪರೀಕ್ಷೆಯ ಪೂರ್ವ ತಯಾರಿಯನ್ನು ಸುಲಭ ರೀತಿಯಲ್ಲಿ ಮಾಡಿದರೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ ಎಂಬುದರ ಕುರಿತು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಾಯರು, ಶ್ರೀಮತಿ ರೆನ್ನಿಲ್ಲಾ ರೋಶ್ನಿ (ಸಹೋದಯ ಸಂಸ್ಥೆಯ ಕಾರ್ಯಕರ್ತೆ) ಮೊದಲಾದವರು ಉಪಸ್ಥಿತರಿದ್ದರು. ನಿರೂಪಣೆ ಕು| ಇವೊನ್ , ಶಿಕ್ಷಕ ವೃಂದದ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by