ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಸಹೋದಯ ಬೆಥನಿ ಮಹಿಳಾ ಒಕ್ಕೂ ಹಾಗೂ ಆಮ್‌ಆದ್ಮಿ ಪಕ್ಷ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22.10.2024 ರಂದು ಉಚಿತ ತಾರಸಿ ತೋಟ/ ಟೆರೆಸ್ ಗಾರ್ಡನಿಂಗ್ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಾರ್ಥನಾ ಗೀತೆಯೊಂದು ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಭ| ಶಾಂತಿ ಪ್ರಿಯ ಬಿ.ಎಸ್, ಬೆಥನಿ ಪ್ರತಿಷ್ಠಾನದ(ರಿ) ಕರ‍್ಯದರ್ಶಿ/ ನಿರ್ದೇಶಕರು, ಸಹೋದಯ ಬೆಥನಿ ಸೇವಾ ಕೇಂದ್ರ ಇವರು ವಹಿಸಿದ್ದರು, ಶ್ರೀಮತಿ ವಿದ್ಯಾ ರಾಕೇಶ್ ( ಸಮಾಜ ಸೇವಕಿ) ಶ್ರೀಯುತ ಶಾನನ್ ಪಿಂಟೊ, ಹಾಗೂ ಡಾ| ವಿಷು ಕುಮಾರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ತದನಂತರ ಶ್ರೀಮತಿ ವಿದ್ಯಾ ರಾಕೇಶ್ ಇವರು ತಾರೆಸಿ ತೋಟವನ್ನು ತಮ್ಮ ಮನೆಯಲ್ಲಿ ಮಹಡಿಯಲ್ಲಿ ಯಾವ ರೀತಿಯಲ್ಲಿ ಗಿಡಗಳನ್ನು ಬೆಳೆಸಬಹುದು ಹಾಗೆಯೇ ಅವುಗಳಿಗೆ ಬೇಕಾದ ಮಣ್ಣು, ರಾಸಾಯನಿಕ ಗೊಬ್ಬರಗಳನ್ನು ತಮ್ಮ ಮನೆಯ ದಿನ ಬಳಕೆಗೆ ಉಪಯೋಗಿಸಿದ ತರಕಾರಿ, ತ್ಯಾಜ್ಯಗಳ ಮೂಲಕ ಯಾವ ರೀತಿಯಲ್ಲಿ ತಯಾರಿಸಬಹುದೆಂಬುದರ ಕುರಿತು ಹಾಗೂ ತೆಂಗಿನ ನಾರನ್ನು ಬಳಸಿ ಕೋ ಕೋ ಪೀಟ್ ತಯಾರಿಸಿ ಇದರಿಂದಲೂ ಸ್ವ-ಉದ್ಯೋಗ ಮಾಡಿ ಆದಾಯವನ್ನು ಗಳಿಸಬಹುದೆಂಬುದಾಗಿ ತಿಳಿಸಿದರು.
ಶ್ರೀಯುತ ಶಾನನ್ ಪಿಂಟೋ ಹಾಗೂ ಶ್ರೀಯುತ ವಿಷು ಕುಮಾರ್ ಇವರು ಗಿಡಗಳಿಗೆ ಕಶಿ ಕಟ್ಟುವಿಕೆ ಹಾಗೂ ಯಾವ ಸಮಯದಲ್ಲಿ ಕಶಿ ಕಟ್ಟಿದರೆ ಉತ್ತಮ ಹಾಗೂ ಇದರ ಪ್ರಯೋಜನ ಮತ್ತು ಗಿಡಗಳಿಗೆ ಯಾವ ಪೌಷ್ಠಿಕತೆ ನೀಡಬೇಕು ಹಾಗೂ ಗಿಡಗಳಿಗೆ ಯಾವ ರೀತಿಯಲ್ಲಿ ಆರೋಗ್ಯಕರವಾಗಿ, ಗಿಡಗಳ ಫಲವತ್ತತೆಯನ್ನು ಹೆಚ್ಚಿಸಬಹುದೆಂಬುದರ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು, ಹೊಲಿಗೆ ತರಬೇತಿಯ ಶಿಕ್ಷಕಿ, ವಿದ್ಯಾರ್ಥಿಗಳು , ಸಹೋದಯ ಸಂಸ್ಥೆಯ ಕಾರ್ಯಕರ್ತೆ ರೆನ್ನಿಲ್ಲ ರೋಶ್ನಿ ಹಾಗೂ ಆಪ್ ಕಮಿಟಿಯ ಸದಸ್ಯರು ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಸುನೀತಾ, ಸ್ವಾಗತ ಶ್ರೀಮತಿ ಲವೀನಾ ವೇಗಸ್ ಹಾಗೂ ಶ್ರೀಮತಿ ಶೋಭಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.