ದಿನಾಂಕ 18.07.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಮಾಡಮೆ ವಲಯ ಸಭೆಯಲ್ಲಿ ಸದಸ್ಯರಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ , ಕಾರ್ಯಕರ್ತೆ ಶ್ರೀಮತಿ ನಳಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಂತರ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಅಂದರೇನು? ಯಾವೆಲ್ಲ ರೀತಿಯಲ್ಲಿ ಸಾಗಾಣಿಕೆ ನಡೆಸುತ್ತಾರೆ ಉದಾ: ಅಂಗಾಂಗಗಳ ಮಾರಾಟ, ಒಳÀ- ಹೊರ ದೇಶಗಳಲ್ಲಿ ದತ್ತುಗಾಗಿ ಮಕ್ಕಳ ಮಾರಾಟ, ಮನೋರಂಜನೆ ಉದ್ದಿಮೆಗೆ, ಭಿಕ್ಷಾಟನೆಗೆ ಮೊದಲಾದವುಗಳಿಗೆ ಬಳಸುತ್ತಾರೆ ಎಂಬುದನ್ನು ತಿಳಿಸಿದರು ಹಾಗೆಯೇ ಈ ಸಾಗಾಣಿಕೆಯನ್ನು ಯಾವ ರೀತಿಯಲ್ಲಿ ತಡೆಯ ಬಹುದೆಂಬುದರ ಬಗ್ಗೆ ಮಾಹಿತಿ ನೀಡಿ ಪ್ರತಿ ವರ್ಷವು ಈ ದಿನದ ಮಹತ್ವವನ್ನು ತಿಳಿಸುತ್ತಾ ನಮ್ಮಲ್ಲಾದಷ್ಟು ಕಳ್ಳ ಸಾಗಾಣಿಕೆಯನ್ನು ತಡೆದು ಇತರರಿಗೂ ಈ ಬಗ್ಗೆ ತಿಳಿಸಬೇಕೆಂದು ಭ| ಲೀನಾ ಇವರು ತಿಳಿಸಿದರು. ತದನಂತರ ಶ್ರೀಮತಿ ನಳಿನಿ ಶೆಟ್ಟಿ ಇವರು ತಾವು ಪಡೆದುಕೊಂಡ ಮಹಿಳೆ ಮತ್ತು ಮಕ್ಕಳ ಕೇಸುಗಳ ಬಗ್ಗೆ ತಿಳಿಸಿದರು. ಸ್ವಾಗತ ಶ್ರೀಮತಿ ಲೀನಾ ಕ್ಯಾಸ್ತಲಿನ್, ಶ್ರೀಮತಿ ಮೋಹಿನಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಸುಮಾರು 30 ಮಹಿಳೆಯರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.