ದಿನಾಂಕ 9.09.2023 ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು ವತಿಯಿಂದ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ ಬಜ್ಪೆ ಇಲ್ಲಿನ 5ನೇ,6ನೇ,7ನೇ ತರಗತಿ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ ದಿನದ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೇವರ ಸ್ಮರಣೆಯೊಂದಿಗೆ ಆರಂಭಿಸಲಾಯಿತು. ತದನಂತರ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ನಳಿನಿ ಇವರು ಮಕ್ಕಳಿಗೆ ಹದಿಹರೆಯದಲ್ಲಾಗುವ ಬದಲಾವಣೆಗಳು,ಸ್ವಚ್ಛತೆ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಶ್ರೀಮತಿ ರೋಶ್ನಿ ಇವರು ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಭ| ಫ್ರೆಫಿಲ್ಡಾ, ಶಾಲಾ ಶಿಕ್ಷಕರ ವೃಂದ ಮೊದಲಾದವರು ಭಾಗವಹಿಸಿದ್ದರು . ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.