ದಿನಾಂಕ 06.10.2023 ರಂದು ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ ಇಲ್ಲಿನ 8ನೇ 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಭ| ಜೆಸ್ಸಿ ಪ್ರೀಮಾ, ಸಂಪನ್ಮೂಲ ವ್ಯಕ್ತಿಗಳಾದ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಮತ್ತು ಶ್ರೀಮತಿ ರೆನಿಲ್ಲಾ ರೋಶ್ನಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ಹೆಣ್ಣು ಮಕ್ಕಳ ದಿನದ ಮಹತ್ವ ಹಾಗೂ ರಕ್ಷಣೆಯ ಕುರಿತು ತಿಳಿಸಲಾಯಿತು ತದನಂತರ ಶ್ರೀಮತಿ ರೆನಿಲ್ಲಾ ರೋಶ್ನಿ ಇವರು ಹೆಣ್ಣು ಮಕ್ಕಳಿಗೆ ತಮ್ಮ ಹದಿಹರೆಯದಲ್ಲಾಗುವ ಬದಲಾವಣೆ ಹಾಗೂ ಸುರಕ್ಷತೆ ಬಗ್ಗೆ, ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ಮಾದಕ ವ್ಯಸನದ ಪರಿಣಾಮದ ಕುರಿತು ಮಾಹಿತಿ ನೀಡಿದರು.
ತದನಂತರ ಶ್ರೀಮತಿ ನಳಿನಿ ಇವರು ಗಂಡು ಮಕ್ಕಳಿಗೆ ಪ್ರೌಢವಸ್ಥೆ ಹಾಗೂ ಮಾದಕ ವ್ಯಸನ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಬಗ್ಗೆ ಮಾಹಿತಿ ನೀಡಿದರು ನಂತರ ಮಕ್ಕಳನ್ನು ತರಗತಿವಾರು ಗುಂಪು ಮಾಡಿ ಆಟೋಟ ಸ್ಫರ್ಧೆಯನ್ನು ನಡೆಸಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಸಿಹಿಯನ್ನು ಹಂಚಿ ಶ್ರೀ ಪ್ರಶಾಂತ್ ( ದೈಹಿಕ ಶಿಕ್ಷಕರು) ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ಒಟ್ಟು 120 ಮಂದಿ ಮಕ್ಕಳು ಭಾಗವಹಿಸಿದ್ದರು.