ಸಹೋದಯ ಬೆಥನಿ ಸಂಸ್ಥೆಯ ವತಿಯಿಂದ ದಿನಾಂಕ 26.03.2024 ರಂದು ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ ಬಜಪೆ ಇಲ್ಲಿನ 6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು.
ಮೊದಲಿಗೆ ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಧ್ಯಾನದ ಮೂಲಕ ಮಕ್ಕಳಿಗೆ ಏಕಾಗ್ರತೆಯ ಮೌಲ್ಯವನ್ನು ತಿಳಿಸಿಕೊಡಲಾಯಿತು. ತದನಂತರ ಕಾರ್ಯಕರ್ತೆ ಅಮೃತ ಇವರು ಶಿಸ್ತು , ಗೌರವ , ಅನಾವಶ್ಯಕ ಮೊಬ್ಯೆಲ್ ಬಳಕೆ, ಮೌಲ್ಯಗಳು ಮಾಹಿತಿ ನೀಡಿದರು. ಹಾಗೂ ಬೇಸಿಗೆ ಶಿಬಿರದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತು ದಿನಚರಿಯನ್ನು ತಯಾರಿ ಮಾಡುವಂತೆ ಮಕ್ಕಳಿಗೆ ತಿಳಿಸಲಾಯಿತು.ಕು| ಅನುಷ್ಕ ಇವರು ಮಕ್ಕಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಗುಂಪು ಚಟುವಟಿಕೆಗಳನ್ನು ಮಾಡಲಾಯಿತು.
ಮಕ್ಕಳಿಗೆ ಆಟೋಟ ಸ್ಫರ್ಧೆಯನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಹಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಕ್ಯೋಪಾಧ್ಯಾಯರು, ಶಿಕ್ಷಕರ ವೃಂದದವರು ಮೊದಲಾದವರು ಭಾಗವಹಿಸಿದ್ದರು. ಭ| ಆಗ್ನೇಶಿಯ (ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ, ರೋಶನಿ ನಿಲಯ) ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಬೇಸಿಗೆ ಶಿಬಿರದಲ್ಲಿ ಒಟ್ಟು 66 ಮಕ್ಕಳು ಹಾಜರಿದ್ದರು.