ಸಹೋದಯ ಸಭಾಂಗಣದಲ್ಲಿ ದಿನಾಂಕ 28.7.2024 ರಂದು ಸಹೋದಯ ಬೆಥನಿ ಸೇವಾಕೇಂದ್ರ ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ಆಟಿಕೂಟ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಸಂಸ್ಥೆಯ ಸಂಯೋಜಕರಾದ ಭ!ಲೀನಾ ಡಿ’ಕೋಸ್ಟ ಮತ್ತು ಶ್ರೀಮತಿ ಪ್ರೇಮ ಎಲ್. ಅಧ್ಯಕ್ಷರು ಸಹೋದಯ ಬೆಥನಿ ಮಹಿಳಾ ಒಕ್ಕೂಟ ಮೊದಲಾದವರು ಉಪಸ್ಥಿತರಿದ್ದರು. ಆಟಿಯ ಗಮ್ಮತ್ ಫಲಕವನ್ನು ತೆರೆಯುವುದರ ಮುಖಾಂತರ ಡಾ!ಸರಿತಾ ಡಿ’ಸೋಜಾ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಶ್ರೀಮತಿ ನಮಿತಾ ಇವರು ಆಟಿ ತಿಂಗಳ ಮಹತ್ವದ ಕುರಿತು ತಿಳಿಸಿದರು. ಪ್ರತಿ ಸಂಘದ ಸದಸ್ಯರು ತಯಾರಿಸಿ ತಂದಂತಹ ತಿನ್ನಿಸುಗಳ ಹೆಸರಿನ ಪಟ್ಟಿಯನ್ನು ಶ್ರೀಮತಿ ಅನಿತಾರವರು ಹೇಳಿದರು. ತದನಂತರ ಆಟಿತಿಂಗಳ ವಿಶೇಷ ತಿಂಡಿ ತಿನ್ನಿಸುಗಳನ್ನು ಸವಿಯಲಾಯಿತು. ಶ್ರೀಮತಿ ಶೋಭಾ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.