ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ವತಿಯಿಂದ ದಿನಾಂಕ 13.03.2024 ರಂದು ಸಹೋದಯ ಸಭಾಂಗಣದಲ್ಲಿ “ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ” “ಸೇರ್ಪಡೆಗೆ ಸ್ಫೂರ್ತಿ” ಎಂಬ ವಿಷಯವನ್ನು ಆಧರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷರು ಭ| ಮಾರಿಯೇಟ್ ಬಿ.ಎಸ್ ( ಮಹಾಮಾತೆಯ ಸಲಹೆದಾರರು, ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯರು), ಮುಖ್ಯ ಅತಿಥಿಗಳು ಭ| ಡೋನಾ ಸಾಂಕ್ತಿಸ್ ( ಬೆಥನಿ ಕಾನ್ವೆಂಟಿನ ಮುಖ್ಯಸ್ಥರು) ಭ| ಲೀನಾ ಡಿ ಕೋಸ್ಟ ( ಸಂಯೋಜಕರು,ಬೆಥನಿ ಸೇವಾ ಕೇಂದ್ರ ಬೆಂದೂರು,ಮಂಗಳೂರು) , ಶ್ರೀಮತಿ ಪ್ರೇಮ ಎಲ್ ( ಅಧ್ಯಕ್ಷರು, ಸಹೋದಯ ಬೆಥನಿ ಮಹಿಳಾ ಒಕ್ಕೂಟ) ಮೊದಲಾದವರು ಉಪಸ್ಥಿತರಿದ್ದರು. ಹಿಂಗಾರ ಹೂ ಅರಳುವ ಹಾಗೆಯೇ ಎಲ್ಲ ಮಹಿಳೆಯರು ಈ ಸಮಾಜದಲ್ಲಿ ಅರಳಲಿ ಹಾಗೂ ಭಯ ಮುಕ್ತ ವಾತಾವರಣದಲ್ಲಿ ದೈರ್ಯದಿಂದ ಸಬಲೀಕರಣ ನಾಯಕರಾಗಿ ಸರ್ವತೋಮುಖ ಅಭಿವೃದ್ಧಿಗೊಳಲ್ಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ತದನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭ| ಡೋನಾ ಸಾಂಕ್ತಿಸ್ ಬಿ.ಎಸ್( ಬೆಥನಿ ಕಾನ್ವೆಂಟಿನ ಮುಖ್ಯಸ್ಥರು) ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳೆಯರಿಗೆ ಶುಭಹಾರೈಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭ| ಮಾರಿಯೇಟ್ ಬಿ.ಎಸ್ (ಮಹಾಮಾತೆಯ ಸಲಹೆದಾರರು, ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯರು) ಇವರು ಬೆಥನಿ ಸಂಸ್ಥಾಪಕರಾದ ಫಾ| ಆರ್ ಎಫ್ ಸಿ ಮಸ್ಕರೇನ್ಹಸ್ ಇವರನ್ನು ನೆನೆಯುತ್ತಾ ಇವರ ಪ್ರಯಾಣ, ಸ್ಫೂರ್ತಿ ಹಾಗೂ ದೂರ ದೃಷ್ಠಿಯಿಂದ ಸ್ಥಾಪಿಸಲ್ಪಟ್ಟ ಈ ಬೆಥನಿ ಸಂಸ್ಥೆಯು ಗ್ರಾಮೀಣ ಮಹಿಳೆಯರ ಏಳಿಗೆಗಾಗಿ ಸುಮಾರು 103 ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ. ಮಹಿಳೆ ಎಂದರೇ ಒಂದು ದೇವತೆಗೆ ಸಮಾನ ಬಹುಭುಜಗಳುಳ್ಳ ದೇವತೆ. ಮಹಿಳೆಯು ತಾಯಿಯಾಗಿ,ಅಕ್ಕ-ತಂಗಿಯಾಗಿ, ಧಾರ್ಮಿಕ ಭಗಿನಿಯಾಗಿ, ಅಜ್ಜಿಯಾಗಿ ಇನ್ನೂ ಹಲವು ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆ ಹಾಗೆಯೇ ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಮಹಿಳೆಯೂ ಕೂಡ ಹೊಸ ದಿಕ್ಕಿನತ್ತ ಚಲಿಸುತ್ತಾ ವೈಜ್ಞಾನಿಕ ಯುಗದತ್ತಾ ಪ್ರಗತಿಪರ ದಾರಿಯಲ್ಲಿ ಸಾಗುತ್ತಿದ್ದಾರೆ. ಯಾವುದೇ ಒಂದು ರಾಷ್ಟ್ರ ಪ್ರಗತಿ ಹೊಂದಬೇಕಾದರೆ ಮೊದಲು ಅಲ್ಲಿನ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸದ್ದರೆ ಮಾತ್ರ ಆ ರಾಷ್ಟ್ರವು ಪ್ರಗತಿ ಹೊಂದಿದೆ ಎಂದು ತಿಳಿಯ ಬಹುದು. ಅದೇ ರೀತಿ ಮಹಿಳೆಯು ಧೈರ್ಯಶಾಲಿಯಾಗಿ, ಶಕ್ತಿಶಾಲಿಯಾಗಿ, ಸಾಮಥ್ರ್ಯವಂತರಾಗಿ ತಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಿರಬೇಕೆಂದು ತಿಳಿಸುತ್ತಾ ಸೇರಿದ ಎಲ್ಲ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಶಯವನ್ನು ಕೋರಿದರು.
ನಂತರ ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.ನಂತರ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಛದ್ಮವೇಷ ಸ್ಪರ್ಧೆ, ಜಾನಪದ ಹಾಡು, ಪಿಕ್ ಆಂಡ್ ಸ್ಪೀಕ್, ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಹಿಳೆಯರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ನಂತರ ಮಹಿಳೆಯರಿಂದ ನೃತ್ಯ, ಹಾಗೂ ಕಿರು ನಾಟಕ, ಮಕ್ಕಳ ಅನುಭವ ಹಂಚಿಕೆ ಮೊದಲಾದ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯರು, ಹೆತ್ತವರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿಗಳು, ಬೆಥನಿ ಕಾನ್ವೆಂಟಿನ ಭಗಿನಿಯರು, ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ, ಮಹಿಳಾ ಸಂಚಲನದ ಸದಸ್ಯರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ನಿರೂಪಣೆ ಶ್ರೀಮತಿ ಅನಿತಾ ಮತ್ತು ಕು| ಅಮೃತಾ , ಸ್ವಾಗತ ಶ್ರೀಮತಿ ಸುನಿತಾ, ವಂದರ್ನಾಪಣೆ ಶ್ರೀಮತಿ ಪೂರ್ಣಿಮ. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.