ದಿನಾಂಕ ೧೪.೦೯.೨೦೨೪ ರಂದು ಸಹೋದಯ ಬೆಥನಿ ಸಮಾಜ ಸೇವಾ ಪ್ರತಿಷ್ಠಾನ ಮತ್ತು ಸಹೋದಯ ಬೆಥನಿ ಸೇವಾಕೇಂದ್ರ ಬೆಂದೂರು ಮಂಗಳೂರು ಹಾಗೂ ಬಾಳ ಮಂಡಲ ಪಂಚಾಯತ್ ಜಂಟಿ ಆಶ್ರಯದಲ್ಲಿ ಕಳುವಾರು ಆಶ್ರಯ ಕಾಲನಿಯಲ್ಲಿ ಆರು ತಿಂಗಳ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತಾರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಭ!ಲೀನಾ ಡಿ’ಕೋಸ್ಟ ಸಂಯೋಜಕರು ಸಹೋದಯ ಬೆಥನಿಸೇವಾ ಕೇಂದ್ರ, ಶ್ರೀಮಾನ್ ಶಂಕರ ಜೋಗಿ ಅಧ್ಯಕ್ಷರು ಬಾಳ ಮಂಡಲ ಪಂಚಾಯತ್, ಶಿಕ್ಷಕಿ ಶ್ರೀಮತಿ ಕುರೇಶ, ಶ್ರೀಮತಿ ದೇವಕಿ ಮಾಜಿ ಅಧ್ಯಕ್ಷರು ಶಿವಜ್ಯೋತಿ ಮಹಿಳಾ ಮಂಡಲ, ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಜಿ ಶೆಟ್ಟಿ ಹಾಗೂ ಶ್ರೀಮತಿ ರೆನ್ನಿಲ್ಲಾ ರೋಶ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮಾನ್ ಶಂಕರ ಜೋಗಿಯವರು ಪ್ರಮಾಣ ಪತ್ರವನ್ನು ನೀಡಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಕಲಿಕೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ ಎಂದು ಆರೈಸಿದರು. ಭ!ಲೀನಾ ಡಿ’ಕೋಸ್ಟರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಾವು ಪಡೆದುಕೊಂಡ ಪ್ರಮಾಣ ಪತ್ರಕ್ಕೆ ಪ್ರಾಮುಖ್ಯತೆ ಇರುವುದರಿಂದ ತಮ್ಮಂತೆಯೇ ಇತರರಿಗೂ ತಾವು ಕಲಿತ ವಿದ್ಯೆಯನ್ನು ಕಲಿಸಿ ಉತ್ತಮ ಜೀವನ ನಡೆಸಬಹುದು ಎಂದು ಹಾರೈಸಿದರು. ವಿದ್ಯಾರ್ಥಿಗಳಾದ ಶಶಿಕಲ ಮತ್ತು ಮಂಜುಳ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ನಳಿನಾಕ್ಷಿ, ಸ್ವಾಗತ ಶ್ರೀಮತಿ ಶೃತಿ ಹಾಗೂ ಶ್ರೀಮತಿ ಮಮತರವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.