ದಿನಾಂಕ 17.03.2025 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ (ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು, ಅಮೃತ್ ತಲಿತಾ ಕುಮ್ ಇಂಡಿಯಾ, ಬಜಪೆ ಪಟ್ಟಣ ಪಂಚಾಯತ್, ಬಜಪೆ ಪೋಲೀಸ್ ಠಾಣೆ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಸಂತ ರೈಮಂಡ್ಸ್ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಬಜಪೆ ಮಾರುಕಟ್ಟೆಯಲ್ಲಿ ಸೈಬರ್ ಕ್ರೈಂ, ಮಾದಕ ವ್ಯಸನ, ಮಾನವ ಕಳ್ಳ ಸಾಗಾಣಿಕೆ ತಡೆ ಪ್ಲಾಸ್ಟಿಕ್ ನಿಷೇಧ ಮತ್ತು ಜಲ ಸಂರಕ್ಷಣೆ ಕುರಿತು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಸಂತ ರೈಮಂಡ್ಸ್ ಕಾಲೇಜು ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಿದರು.
ಮೊದಲಿಗೆ ಲತಾ ಕೆ.ಎಸ್ (ಪೋಲೀಸ್ ಸಬ್ ಇನ್ಫೆಕ್ಟರ್, ಬಜಪೆ ಪೋಲೀಸ್ ಠಾಣೆ) ಇವರು ಸೈಬರ್ ಕ್ರೈಂ ಎಂದರೇನು? ಇದರಿಂದ ಜನರು ಯಾವೆಲ್ಲ ರೀತಿ ಪರಿಣಾಮವನ್ನು ಎದುರಿಸುತ್ತಿದ್ದಾರೆ ಮತ್ತು ಇದನ್ನು ಯಾವ ರೀತಿಯಲ್ಲಿ ತಡೆಯ ಬಹುದೆಂಬುದರ ಕುರಿತು ಮಾಹಿತಿ ನೀಡಿದರು. ನಂತರ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಇತ್ತೀಚಿನ ದಿನಗಳಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಮಾದಕ ದ್ರವ್ಯವನ್ನು ಸೇವಿಸಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರೊಂದಿಗೆ ಮಾನವ ಕಳ್ಳ ಸಾಗಾಣಿಕೆ ಎಂದರೇನು? ಸಾಮಾನ್ಯವಾಗಿ ಈ ಜಾಲಕ್ಕೆ ಯಾರೆಲ್ಲಾ ತುತ್ತಾಗುತ್ತಾರೆ ಇದರಿಂದಾಗುವ ಸಮಸ್ಯೆಗಳು ಮತ್ತು ಯಾವ ರೀತಿಯಲ್ಲಿ ಈ ಸಾಗಾಣಿಕೆಯನ್ನು ತಡೆಗಟ್ಟ ಬಹುದೆಂಬುದರ ಕುರಿತು ಮಾಹಿತಿ ನೀಡಿದರು.
ತದನಂತರ ಸಂತ ರೈಮಂಡ್ಸ್ ಕಾಲೇಜು, ವಾಮಂಜೂರು, ಇಲ್ಲಿನ ಉಪನ್ಯಾಸಕರಾದ ಶ್ರೀಮತಿ ವಿನುತಾ ಅವರು ಜಲ ಸಂರಕ್ಷಣೆ ಕುರಿತು ಮಾತನಾಡಿದರು. ನದಿಗಳಲ್ಲಿ ತ್ಯಾಜ್ಯಾಗಳನ್ನು ಎಸೆಯುದರಿಂದ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಪರದಾಡುವ ಪರಿಸ್ಥಿತಿ ಬರಬಹುದೆಂದು ಎಚ್ಚರಿಸಿದರು.
ನಂತರ ವಿದ್ಯಾರ್ಥಿಗಳು ಘೋಷಣಾ ಫಲಕವನ್ನು ಹಿಡಿದು ಘೋಷವಾಕ್ಯಗಳನ್ನು ಕೂಗುತ್ತಾ ಬಜಪೆ ಬಸ್ಸ್ ನಿಲ್ದಾಣದಿಂದ ಮಾರುಕಟ್ಟೆಯವರೆಗೆ ಜಾಥ ಮಾಡಿದರು.
ಬಜಪೆ ಮಾರುಕಟ್ಟೆಯಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸೈಬರ್ ಕ್ರೈಂ, ಮಾದಕ ವ್ಯಸನ ತಡೆ, ಮಾನವ ಕಳ್ಳ ಸಾಗಾಣಿಕೆ ತಡೆ ಹಾಗೂ ಸಂತ ರೈಮಂಡ್ಸ್ ಕಾಲೇಜು ವಿದ್ಯಾರ್ಥಿಗಳು ಜಲ ಸಂರಕ್ಷಣೆ ಕುರಿತು ಬೀದಿ ನಾಟಕದ ಮುಖಾಂತರ ಜನ ಜಾಗೃತಿ ಮೂಡಿಸಿದರು.
ಬಜಪೆ ಪಟ್ಟಣ ಪಂಚಾಯತ್‍ನ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ರವಿಕೃಷ್ಣ, ಡಾ|| ಸರಿತಾ ಡಿ’ಸೋಜಾ ಐಕ್ಯೂ ಎಸಿ-ಸಂಯೋಜಕರು ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಶ್ರೀ ರೋಶನ್ ಡಿ’ಸೋಜಾ ಸಹಾಯಕ ಪ್ರಾಧ್ಯಾಪಕರು ಮತ್ತು ವಿಸ್ತಾರಣಾಧಿಕಾರಿ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಕು| ಗಾಯತ್ರಿ ಉಪನ್ಯಾಸಕರು ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಸಹೋದಯ ಸಂಸ್ಥೆಯ ಕಾರ್ಯಕರ್ತೆಯರಾಧ ಶ್ರೀಮತಿ ರೆನ್ನಿಲ್ಲಾ ರೋಶನಿ ಮತ್ತು ಶ್ರೀಮತಿ ವಾಣಿ ಮೊದಲಾದವರು ಭಾಗವಹಿಸಿದ್ದರು.