ದಿನಾಂಕ 30.1.2019 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಸಹೋದಯ ಸಭಾಂಗಣದಲ್ಲಿ ಹುತತ್ಮಾರ ದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೆಂದ್ರದ ನಿರ್ದೇಶಕರಾದ ಭ| ಶಾಂತಿ ಪ್ರಿಯ, ಡಾ| ಶರತ್ ಕುಮಾರ್ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಬೆಥನಿ ಸಂಸ್ಥೆಯ ಆಡಳಿತಾಧಿಕಾರಿ ಭ| ಕ್ಲಿಯೋಫ ಹಾಗೂ ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ, ಭ| ಲೀನಾ ಪಿರೇರಾ ಮತ್ತು ಸಹೋದಯ ಸಂಸ್ಥೆಯ ಸಂಯೋಜಕರು ಮತ್ತು ಮೊದಲಾದ ಉಪಸ್ಥಿತರಿದ್ದರು. ಮೊದಲಿಗೆ ಸಂತ ಸೆಬಾಸ್ಟಿಯನ್ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷವಹಿಸಿದ ಭ| ಶಾಂತಿ ಪ್ರಿಯ ಇವರು ದೀಪಾ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಹುತಾತ್ಮರ ದಿನವೆಂದರೆ ಏನು , ಯಾಕೆ ಹುತಾತ್ಮರ ದಿನಾಚರಣೆ ಆಚರಿಸುತೆವೆಂಬುದರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ತದನಂತರ ಡಾ| ಶರತ್ ಕುಮಾರ್ ಇವರು ರಕ್ತದಾನ ಏಕೆ ಮಾಡಬೇಕು ಇದರಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಹಾಗೂ ರಕ್ತವನ್ನು ಈ ಮೂರು ಗುಂಪುಗಳಾಗಿ ವಿಭಾಗಿಸಲಾಗಿದೆ ಹಾಗೂ ಯಾವ ಗುಂಪಿನವರು ಯಾರಿಗೆ ರಕ್ತ ನೀಡಬಹುದು ಹಾಗೂ ಎಷ್ಟು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು ಸ್ವಾಗತ ಶ್ರೀಮತಿ ನಿಮಿಷಾ, ಶ್ರೀಮತಿ ನಳಿನಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಒಟ್ಟು 60 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.