ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಸದಸ್ಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು ಸಹೋದಯ ಸಂಸ್ಥೆಯ ಸಂಯೋಜಕಿಯಾದ ಭ| ಲೀನಾ ಡಿ ಕೋಸ್ಟ ಇವರು ಬಂದಂತಹ ಎಲ್ಲ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಲಿಂಗ ಸಮತೋಲಿತ ಪ್ರಪಂಚವನ್ನು ನಿರ್ಮಿಸೋಣ ಎಂಬ ಉದ್ದೇಶದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶ್ರೀಮತಿ ಜಯಶ್ರೀ ಪವರ್ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಸರಕಾರದ ವತಿಯಿಂದ ಯಾವೆಲ್ಲ ಸೌಲಭ್ಯಗಳು ಇವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಹಿರಿಯ ಸಂಪಾದಕಿಯಾಗಿದ್ದ ಬಿ.ಎಂ ರೋಹಿಣಿಯವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಸನ್ಮಾನಿತರಾದ ಬಿ.ಎಂ ರೋಹಿಣಿ ಇವರು ಲಿಂಗ ಸಮತೋಲಿತ ಪ್ರಪಂಚವನ್ನು ನಿರ್ಮಿಸೋಣ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ 17 ಶಾಲಾ ಮಕ್ಕಳಿಗೆ 2018-2019 ನೇ ಸಾಲಿನ ಕಲಿಕಾ ಸಾಮಥ್ರ್ಯ ಪರೀಕ್ಷೆಯನ್ನು ನಡೆಸಲಾಯಿತು ಅದರಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಮಾಣ ಪತ್ರ ಹಾಗೂ ನಗದು ಹಣವನ್ನು ನೀಡಲಾಯಿತು ಹಾಗೂ ಪೋತ್ಸಾಹಕರ ಬಹುಮಾನವನ್ನು ನೀಡಲಾಯಿತು.
ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಯಿತ್ತು. ಅದರಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು ತದನಂತರ ಸ್ವ ಸಹಾಯ ಸಂಘದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭವಾಯಿತು. ಕಾನ್ವೆಂಟಿನ ಕನ್ಯ ಸ್ತ್ರೀಯರು ಹೆಣ್ಣು ಭ್ರೂಣ ಹತ್ಯೆದ ಬಗ್ಗೆ ಒಂದು ಕಿರುನಾಟಕವನ್ನು ಪ್ರದರ್ಶಿಸಿದರು ನಂತರ ನೃತ್ಯ, ಹಾಡುಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಕಾರ್ಯಕ್ರಮದ ನಿರೂಪಣೆ ಶ್ರೀಮತಿ ನಿಮಿಷ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಇವರ ಧನ್ಯವಾದ ಸಮರ್ಪಿಸಿದರು ಮದ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.