ದಿನಾಂಕ 4.04.2019ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಜ್ಪೆ ಇಲ್ಲಿನ 3ನೇ ತರಗತಿಯಿಂದ 7ನೇ ತರಗತಿಯ ವರೆಗಿನ ಮಕ್ಕಳಿಗೆ ಒಂದು ದಿನದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲಿ ಶಾಲಾ ಶಿಕ್ಷಕಿ ,ಸಹೋದಯ ಬೆಥನಿ ಸೇವಾ ಕೇಂದ್ರ ದ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ, ಕು|ದೀಪಿಕಾ,ಕು|ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು . ತದನಂತರ 3ನೇ ತರಗತಿ ಮತ್ತು 4ನೇ ತರಗತಿಯ ಮಕ್ಕಳನ್ನು 8 ಗುಂಪುಗಳನ್ನಾಗಿ ಮಾಡಿ ಅವರಿಗೆ ಕಲಿಕೆಗೆ ಬೇಕಾಗುವ ವಿಷಯಗಳನ್ನು ಕೊಟ್ಟು ಆ ವಿಷಯಗಳನ್ನು ಒಂದು ಕಿರು ನಾಟಕದ ಮೂಲಕ ಅಭಿನಯಿಸಲು ಹೇಳಲಾಯಿತು. ಅದೇ ರೀತಿ 5ನೇ ,6ನೇ,7ನೇ ತರಗತಿಯ ಮಕ್ಕಳಿಗೂ ಅದೇ ರೀತಿಯ ವಿಷಯಗಳನ್ನು ಕೊಟ್ಟು ಅಭಿನಯಿಸಲು ಹೇಳಲಾಯಿತು. ತದನಂತರ ಮಕ್ಕಳಿಗೆ ಕೊಟ್ಟಂತಹ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಗಳನ್ನು ತಿಳಿಸಲಾಯಿತು. ನಂತರ ಮಕ್ಕಳಿಗೆ ಬಲೂನ್ ರಕ್ಷu,É ಕಾಫಿ-ದೋಸೆ,ಮೊದಲಾದ ಆಟಗಳನ್ನು ಆಡಿಸಲಾಯಿತು. ಅದರಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದಲೇ ಹಾಡು ಕಥೆಗಳನ್ನು ಹೇಳಿಸಲಾಯಿತು. ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ಶಿಕ್ಷಕ ವೃಂದದವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಒಟ್ಟು 200 ಮಕ್ಕಳು ಭಾಗವಹಿಸಿದ್ದರು.