ದಿನಾಂಕ 01.04.2024 ಮತ್ತು 02.04.2024 ರಂದು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ ಇಲ್ಲಿನ ಒಂದನೇ ತರಗತಿಯಿಂದ 5ನೇ ತರಗತಿಯ ವರೆಗಿನ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು. ಸಹೋದಯ ಸಂಸ್ಥೆಯ ಕಾರ್ಯಕರ್ತೆಯಾದ ಕು| ಅಮೃತಾ ಇವರು ಮಕ್ಕಳಿಗೆ ಶಿಸ್ತು,ಗೌರವ ಮತ್ತು ಮೌಲ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಮಕ್ಕಳನ್ನು 5 ಗುಂಪುಗಳನ್ನಾಗಿ ವಿಂಗಡಿಸಿ ಗುಂಪು ಕಲಿಕೆಯ ಕುರಿತಾದ ಚಟುವಟಿಕೆಯನ್ನು ನಡೆಸಿ ಅಂದಿನ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

ಶಿಬಿರದ ಎರಡನೇಯ ದಿನದಂದು 6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಸ್ತಿನ ಮಹತ್ವದ ಕುರಿತು ಉದಾಹರಣೆಯ ಮುಖಾಂತ ಮಾಹಿತಿಯನ್ನು ನೀಡಲಾಯಿತು. ನಂತರ ಮಕ್ಕಳನ್ನು 4 ಗುಂಪುಗಳಾಗಿ ವಿಂಗಡಿಸಿ ಗುಂಪಿಗೆ ಓರ್ವ ನಾಯಕನನ್ನು ಆರಿಸಿ ಗುಂಪು ಚಟುವಟಿಕೆ ಚಟುವಟಿಕೆಯನ್ನು ನಡೆಸಲಾಯಿತು. ನಂತರ ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ನಡೆಸಿ ಬಹುಮಾನವನನು ವಿತರಿಸಲಾಯಿತು.ತದನಂತರ ಮಕ್ಕಳಿಂದ ನೃತ್ಯ, ಹಾಡುಗಳನ್ನು ಹಾಡಿಸಲಾಯಿತು ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by