ಸಂತ 08.04.2019 ರಂದು ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ ಇಲ್ಲನ 3ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಒಂದು ದಿನದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಶ್ರೀಮತಿ ನಿಮಿಶಾ,ಕು|ದೀಪಿಕಾ,ಕು|ರಂಜಿನಿ ಇವರು ಭಾಗವಹಿಸಿದ್ದರು. ಮಕ್ಕಳನ್ನು 10 ಗುಂಪುಗಳನ್ನಾಗಿ ಮಾಡಿ ಅವರಿಗೆ ಕಲಿಕೆಗೆ ಬೇಕಾಗುವ ವಿಷಯಗಳನ್ನು ನೀಡಿ ಕಿರು ನಾಟಕಗಳ ಮೂಲಕ ಅಭಿನಯಿಸಲು ತಿಳಿಸಲಾಯಿತು ಮತ್ತು 3ನೇ ,4ನೇ ತರಗತಿಯ ಮಕ್ಕಳಿಗೆ ನಾಯಕತ್ವ , ಗುರು-ಹಿರಿಯರನ್ನು ಹೇಗೆ ಗೌರವಿಸಬೇಕು ಹಾಗೂ ಜಲಮಾಲಿನ್ಯ ಪ್ರಕೃತಿ ಮಾಲಿನ್ಯಗಳ ಬಗ್ಗೆ ಬರೆಯಲು ತಿಳಿಸಲಾಯಿತು. ನಂತರ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಅದರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ನಂತರ ಮಕ್ಕಳಿಂದಲೇ ಹಾಡು,ನೃತ್ಯ,ಕಥೆಗಳನ್ನು ಹೇಳಿಸುವುದರ ಮೂಲಕ ಅವರ ಪ್ರತಿಭೆಗಳನ್ನು ಹೊರಹಾಕಲಾಯಿತು. ಒಟ್ಟು 90 ಮಕ್ಕಳು ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರು.