ದಿನಾಂಕ 30.07.2019 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ವತಿಯಿಂದ ಸಹೋದಯ ಸಭಾಂಗಣದಲ್ಲಿ ಆಟಿಡೊಂಜಿ ದಿನ ವನ್ನು ಆಚರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಸಂಸ್ಥೆಯ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ, ಶ್ರೀಮತಿ ಶ್ರೀಲತಾ,ಶ್ರೀಮತಿ ಲತಾ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ, ಒಕ್ಕೂಟದ ಪದಾಧಿಕಾರಿಗಳು , ಸಹೋದಯ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ನಿಮಿಶಾ, ಕು| ದೀಪಿಕಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಆಟಿ ತಿಂಗಳ ಮಹತ್ವವನ್ನು ಒಕ್ಕೂಟದ ಸದಸ್ಯೆಯಾದ ಶ್ರೀಮತಿ ಪ್ರಭಾ ಇವರು ಅಭಿಪ್ರಾಯವನ್ನು ತಮ್ಮ ಮಾತುಗಳಲ್ಲಿ ವ್ಯಕ್ತ ಪಡಿಸಿದರು ತದನಂತರ ಆಟಗಳನ್ನು ಆಡಿಸಲಾಯಿತು ಅದರಲ್ಲಿ ಗೆದ್ದಂತಹ ಮಹಿಳೆಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ನಂತರ ಎಲ್ಲಾ ಸಂಘದ ಸದಸ್ಯರು ತಂದಂತಹ ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳ ಹಂಚಿ ಆಟಿ ಹಬ್ಬದ ಆಚರಣೆ ಮಾಡಲಾಯಿತು. ಒಟ್ಟು 58 ಜನರು ಭಾಗವಹಿಸಿದ್ದರು.