ದಿನಾಂಕ 30.07.2019 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು ಇವರ ವತಿಯಿಂದ ಸಹೋದಯ ಸಭಾಂಗಣದಲ್ಲಿ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ದಿನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶೀಮತಿ ಶ್ರೀಲತಾ ( ಹೆಡ್ ಕಾನ್‍ಸ್ಟೆಬಲ್ ) ,ಶ್ರೀಮತಿ ಲತಾ( ಇಕಾನಾಮಿಕ್ ಮತ್ತು ನಾರ್ಕೋಟಕ್ಸ್ ಕ್ರೈಂ ಪೋಲೀಸ್ ಠಾಣೆಯ ಪಿ.ಎಸ್.ಐ) ಭ| ಅನಿತಾ ಶಾಂತಿ( ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥೆ), ಭ|ಲೀನಾ ಡಿ’ಕೋಸ್ಟ ( ಸಹೋದಯ ಸಂಸ್ಥೆಯ ಸಂಯೋಜಕರು) ಮೊದಲಾದವರು ಉಪಸ್ಥಿತರಿದ್ದರು. ದೇವಾ ನಾ ಆರಾಧಿಪೆ ಎಂಬ ಪ್ರಾರ್ಥನಾ ಗೀತೆ ಹಾಗೂ ದೀಪ ಬೆಳಿಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಂದಂತಹ ಎಲ್ಲಾ ಅತಿಥಿ ಗಣ್ಯರನ್ನು ಸಹೋದಯದ ಕಾರ್ಯಕರ್ತೆಯಾದ ಶ್ರೀಮತಿ ನಿಮಿಶಾ ಇವರು ಸ್ವಾಗತಿಸಿದರು.

ಅ ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಶ್ರೀಲತಾ ಇವರು ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾದಕ ದ್ರವ್ಯದ ಸೇವನೆಯಿಂದಾಗುವ ಪರಿಣಾಮವೇನು? ಮತ್ತು ಈ ವ್ಯಸನಕ್ಕೆ ಸಾಮಾನ್ಯವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೇಗೆ ತುತ್ತಾಗುತ್ತಾರೆ ಎಂಬುದನ್ನು ವಿವರಿಸಿದರು. ಅವರಿಗೆ ಸಣ್ಣ ಪುಟ್ಟ ವಸ್ತುಗಳು ಅಥವಾ ಹಣದ ಆಸೆಯನ್ನು ಹುಟ್ಟಿಸಿ ಅವರಿಂದಲೇ ಈ ಮಾದಕ ವಸ್ತುಗಳ ಮಾರಾಟವನ್ನು ನಡೆಸುತ್ತಾರೆ. ಆದುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಶಾಲೆ ಅಥವಾ ಕಾಲೇಜುಗಳಿಗೆ ಕಳುಹಿಸುವಾಗ ಅವರು ಕಾಲೇಜುಗಳಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದರ ಬಗ್ಗೆ ಸ್ವಲ್ಪ ಗಮನಹರಿಸಿ ಈ ಮಾದಕ ವ್ಯಸನಗಳಿಗೆ ಅವರು ತುತ್ತಾಗದಂತೆ ತಾವು ಎಚ್ಚರ ವಹಿಸಬೇಕೆಂದು ತಿಳಿಸಿದರು. ಇದೀಗ ನಮ್ಮ ದೇಶದಲ್ಲಿ ಮಾನವ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚಾಗಿದ್ದು, ಈ ಸಾಗಾಣಿಕೆಯನ್ನು ಹೇಗೆ ನಡೆಸುತ್ತಾರೆ ಮತ್ತು ನಾವಿದನ್ನು ಹೇಗೆ ತಡೆಗಟ್ಟಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆ ಕು|ರಂಜಿನಿ ಹಾಗೂ ಭ|ಲೀನಾ ರವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಒಟ್ಟು 58 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by