ದಿನಾಂಕ 20.01.2021 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಉಳ್ಯಾ, ಬಾಳ, ಕಳವಾರು ಅಂಗನವಾಡಿ ಕೇಂದ್ರದಲ್ಲಿ ಕೋವಿಡ್-19 ನ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು| ಐರಲ್ , ಅಂಗನವಾಡಿ ಕೇಂದ್ರದ ಶಿಕ್ಷಕಿಯರು, ಸಹಾಯಕಿಯರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊರೋನದ ಬಗ್ಗೆ ಜಾಗೃತ ಮಾಹಿತಿಯನ್ನು ನೀಡಿ ಕಡ್ಡಾಯವಾಗಿ ಮಾಸ್ಕನ್ನು ಧರಿಸುವಂತೆ ತಿಳಿಸಲಾಯಿತು.
ಉಳ್ಯಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕಡಿಮೆ ತೂಕವಿರುವ 13 ಮಕ್ಕಳಿಗೆ,4 ಮಂದಿ ಗರ್ಭಿಣಿ, ಬಾಣಂತಿಯರು,13 ಮಂದಿ 60 ವರ್ಷ ಮೇಲ್ಪಟ್ಟಿರುವ ಮಹಿಳೆಯರಿಗೆ ಪ್ರೊಟೀನ್ , ಸೋಪ್ , ಕಾಫ್‍ಲೇಟ್‍ನನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಟೀಮರ್, ಸೋಪನ್ನು ವಿತರಿಸಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಹ್ಯಾಂಡ್ ವಾಶ್‍ನ್ನು ವಿತರಿಸಲಾಯಿತು.
ತದನಂತರ ಕಳವಾರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ 1ರಂದ 5 ವರ್ಷದೊಳಗಿನ 11 ಮಂದಿ ಮಕ್ಕಳಿಗೆ ಹಾಗೂ 6 ಮಂದಿ ಕಿಶೋರಿಯರಿಗೆ ಹಾಗೂ 60 ವರ್ಷ ಮೇಲ್ಪಟ್ಟ 12 ಮಂದಿಗೆ ಪ್ರೋಟೀನ್ , ಸೋಪ್ , ಕಾಫ್‍ಲೇಟ್‍ನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಟೀಮರ್, ಸೋಪನ್ನು ವಿತರಿಸಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಹ್ಯಾಂಡ್ ವಾಶ್‍ನ್ನು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ನಂತರ ಬಾಳ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ 20 ಮಂದಿ ಜನರಿಗೆ ಪ್ರೊಟೀನ್ , ಸೋಪ್ , ಕಾಫ್‍ಲೇಟ್‍ನನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಟೀಮರ್, ಸೋಪನ್ನು ವಿತರಿಸಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಹ್ಯಾಂಡ್ ವಾಶ್‍ನ್ನು ವಿತರಿಸಲಾಯಿತು.