ದಿನಾಂಕ 29.01.2021 ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಬೆಥನಿ ಮಹಿಳಾ ಒಕ್ಕೂಟದ ಮಾಸಿಕ ಸಭೆಯ ದಿನದಂದು ಸದಸ್ಯರಿಗೆ ಮಾನಸಿಕ ಒತ್ತಡ ನಿವಾರಣ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಯೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ತ, ಸಂಪನ್ಮೂಲ ವ್ಯಕ್ತಿ ಭ| ಇವ್ಲಿನ್ ಬೆನ್ನಿಸ್ ಡಿ.ಹೆಚ್.ಎಂ. (ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯ ಮಂಗಳೂರು ) ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ,ಕಾರ್ಯದರ್ಶಿ ಶ್ರೀಮತಿ ಸುಚಿತ್ರ, ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಕು| ಐರಲ್ ಕು| ರಂಜಿನಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವರ ಸ್ತುತಿಯೊಂದಿಗೆ ಆರಂಭಿಸಲಾಯಿತು. ಸಂಸ್ಥೆಯ ಸಂಯೋಜಕರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭ| ಇವ್ಲಿನ್ ಇವರ ಕಿರು ಪರಿಚಯವನ್ನು ಮಾಡಿ ಹೂ ಕೊಟ್ಟು ಸ್ವಾಗತಿಸಿದರು. ತದನಂತರ ಭ| ಇವ್ಲಿನ್ ಇವರು ಮಾನಸಿಕ ಒತ್ತಡದ ಬಗ್ಗೆ ಮಾಹಿತಿ ನೀಡುತ್ತಾ ಒತ್ತಡ ಎಂದರೆ ಬಲ ಹಾಗೂ ಅಪೇಕ್ಷೆಗಳ ಅಂತರ ಹೆಚ್ಚಾದಾಗ ಒತ್ತಡ ಹೆಚ್ಚಾಗುತ್ತದೆ. ತನಗಿರುವ ಸಾಮಥ್ರ್ಯಕ್ಕಿಂತ ಹೆಚ್ಚು ಅಪೇಕ್ಷೆ ಮಾಡುವುದರಿಂದ ಒತ್ತಡ ಬರುತ್ತದೆ ಎಂದು ತಿಳಿಸಿದರು ನಂತರ ಒತ್ತಡದ ರೂಪಗಳು, ಪರಿಣಾಮಗಳ ಹಾಗೂ ಅದರಿಂದಾಗುವ ಸಮಸ್ಯೆಗಳ ಕುರಿತು ಚರ್ಚೆನಡೆಸಿದರು. ಹಾಗೂ ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಕೆಲವೊಂದು ಆರೋಗ್ಯಕರ ಹಾವ್ಯಸಗಳನ್ನು ಪಾಲಿಸುವುದರಿಂದ ನಮ್ಮಲ್ಲಿನ ಮಾನಸಿಕ ಒತ್ತಡವನ್ನು ನಿಯಂತ್ರಿಸಬಹುದಾಗಿ ತಿಳಿಸಿದರು ಮತ್ತು ಸಂಸ್ಥೆಯ ಸಂಯೋಜರು ಆರೋಗ್ಯವೃದ್ದಿಸುವ ಕೆಲವೊಂದು ವ್ಯಾಯಾಮಗಳ ಛಾಯ ಚಿತ್ರಣದ ಮೂಲಕ ಮಾಹಿತಿ ನೀಡಿದರು. ಶ್ರೀಮತಿ ಸಂಧ್ಯಾ ಇವರು ಎಲ್ಲಾರನ್ನು ಸ್ವಾಗತಿಸಿದರು, ಶ್ರೀಮತಿ ಸುನೀತಾ ಇವರ ಧನ್ಯವಾದವನ್ನು ಸಮರ್ಪಿಸಿ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.