ದಿನಾಂಕ 23.03.2021 ರಂದು ನಮ್ಮ ಬೆಥನಿ ಸಂಸ್ಥೆಯ ಮಹಾಮಾತೆಯಾದ ಭ| ರೋಸ್ ಸೆಲಿನ್ ಹಾಗೂ ಸಹೋದಯ ಬೆಥನಿ ಸೇವಾ ಕೇಂದ್ರದ ನಿರ್ದೇಶಕರಾದ ಭ| ಶಾಂತಿ ಪ್ರಿಯ ಇವರು ಅಧಿಕೃತ ಭೇಟಿಗಾಗಿ ಆಗಮಿಸಿದರು. ಇವರನ್ನು ಮಣಿ ಹಾರವನ್ನು ಹಾಕಿ ಸ್ವಾಗತ ನೃತ್ಯದೊಂದಿಗೆ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.
ತದನಂತರ ನಮ್ಮ ಸಂಸ್ಥೆಯ ನಿರ್ದೇಶಕರು ಮಹಾಮಾತೆಗೆ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು ಹಾಗೂ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ ಇವರು ನಿರ್ದೇಶಕರನ್ನು ಸ್ವಾಗತಿಸಿ ಭ| ಲೀನಾ ಡಿ’ಕೋಸ್ಟ ರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ತದನಂತರ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಅವರು, ಸಹೋದಯ ಸಂಸ್ಥೆಯು ನಡೆಸುತ್ತಿರುವ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ, “ಕೊರೋನಾ ಸಮಯದಲ್ಲಿ ತುರ್ತುನೆರವಿನ ಕಾರ್ಯಕ್ರಮವನ್ನು ಆಯೋಜಿಸಿ ಹಲವಾರು ಬಡ ಕುಟುಂಬ ಹಾಗೂ ಶಾಲಾ ಮಕ್ಕಳಿಗೆ ಮಾಹಿತಿಗಳನ್ನು ನೀಡಿ ಉತ್ತವಾದ ಕೆಲಸವನ್ನು ಕೈಗೊಂಡಿದ್ದಿರಿ. ಅದೇ ರೀತಿ ಮುಂದಿನ ದಿನಗಳಲ್ಲಿ ನೀವು ಹಮ್ಮಿಕೊಂಡಿರುವ ಯೋಜನೆಗಳಾದ ಗೃಹ ಶುಶ್ರೂಷಾ ತರಬೇತಿ, ಹೊಲಿಗೆ ತರಬೇತಿ, ಕೈ ಚೀಲ ತಯಾರಿ ಪ್ರಸ್ತುತ ದಿನಗಳಲ್ಲಿ ಜನರಿಗೆ ಉಪಯಕ್ತವಾಗಿರುವಂತದಾಗಿದ್ದು. ಇನ್ನು ಮುಂದೆಯೂ ಇಂತಹ ಯೋಜನೆಗಳನ್ನು ಕೈಗೊಂಡು ಹೆಚ್ಚಿನ ಸಮಾಜ ಸೇವೆಯನ್ನು ಮಾಡುತ್ತಿರಿ” ಎಂದು ಶುಭಹಾರೈಸಿದರು.