Bethany Social Service Trust ® through Sahodaya Bethany Seva Kendra Bendur, Mangalore its social wing continues to carry out emergency outreach programme to the poor and needy. On 13th,16th and 17th August 2021 we distributed food kit and protection kit to 90 families at Anthoni katte - Karmbar and Shediguri in Jokatte Gram Panchayat and Oddidhakala Bajpe and surrounding villages of Bajpe .We owe our gratitude to ARISE INDIA Emergency Fund 2021 for granting us the payment towards this cause. We pray God’s blessings and success to Arise India and Team.


ತುರ್ತು ನೆರವಿನ ಕಾರ್ಯಕ್ರಮಗಳು (13.08.2021)
ದಿನಾಂಕ 13.08.2021 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆ ಬಜ್ಪೆ ಇಲ್ಲಿನ ಬಡಕುಟುಂಬಗಳಿಗೆ ಆಹಾರ ಪೊಟ್ಟಣ, ಔಷಧಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೋವಿಡ್-19 ರ ಮಂಜಾಗೃತೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆಯ 15 ಬಡವಿದ್ಯಾರ್ಥಿಗಳ ಕುಟುಂಬಗಳಿಗೆ ಹಾಗೂ ಅಂತೋನಿ ಕಟ್ಟೆ ಕರಂಬಾರಿನ 10 ಕುಟುಂಬಗಳಿಗೆ ಆಹಾರ ಪೊಟ್ಟಣ, ಔಷಧಿ ಕಿಟ್, ಗ್ಲಾವ್ಸ್ ,ಸೋಪು,ಮಾಸ್ಕ್, ಕಾಫ್ಲೇಟ್, ವಿಟಮಿನ್ -ಸಿ ಮಾತ್ರೆ ಮೊದಲಾದವುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಜ್ಪೆ ಲಿಟ್ಲ್ ಫ್ಲವರ್ ಶಾಲೆಯ ಮುಖ್ಯೋಪಾಧ್ಯಾಯರಾದ ಭ| ವಿನಿಶಾ, ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ತ, ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ , ಕು| ಐರಲ್, ಕು|ರಂಜಿನಿ ಮುಮ್ತಾಜ್ ಮೊದಲಾದವರು ಉಪಸ್ಥಿತರಿದ್ದರು.


ತುರ್ತು ನೆರವಿನ ಕಾರ್ಯಕ್ರಮಗಳು (16.08.2021)

ದಿನಾಂಕ 16.08.2021 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಬಜ್ಪೆ ಪಂಚಾಯತ್‍ನಲ್ಲಿ ಒಡ್ಡಿದಕಲ ವ್ಯಾಪ್ತಿಯ ಬಡಕುಟುಂಬದ ಸದಸ್ಯರಿಗೆ ಆಹಾರ ಪೊಟ್ಟಣ ಹಾಗೂ ಔಷಧಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೋವಿಡ್ 19 ರ ಮುಂಜಾಗ್ರತೆಯ ಕುರಿತು ಮಾಹಿತಿ ನೀಡಿ ಸುಮಾರು 28 ಬಡಕುಟುಂಬಗಳಿಗೆ ಆಹಾರ ಪೊಟ್ಟಣ , ಸ್ಯಾನಿಟೈಸರ್, ಮಾಸ್ಕ್ , ಗ್ಲಾವ್ಸ್ , ಸೋಪ್ , ಕಾಪ್ಲೇಟ್‍ಗಳನ್ನು ವಿತರಿಸಲಾಯಿತು.. ಕಾರ್ಯಕ್ರಮದಲ್ಲಿ ಬಜ್ಪೆ ಪಂಚಾಯತಿನ ಸದಸ್ಯರಾದ ಮಹಮ್ಮದ್ ಖಲಂದಾರ್ , ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ,ಕುಮಾರಿ ಐರಲ್, ಕುಮಾರಿ ರಂಜಿನಿ , ಮುಮ್ತಾಜ್ ಮೊದಲಾದವರು ಉಪಸ್ಥಿತರಿದ್ದರು. .

ತದನಂತರ ಶೇಡಿಗುರಿ – ಜೋಕಟ್ಟೆ ಅಂಗನವಾಡಿ ವ್ಯಾಪ್ತಿಯ 25 ಬಡಕುಟುಂಬಗಳಿಗೆ ಕೋವಿಡ್ 19 ರ ಮುಂಜಾಗ್ರತೆಯ ಕುರಿತು ಮಾಹಿತಿ ನೀಡಿ ಸುಮಾರು 25 ಬಡಕುಟುಂಬಗಳಿಗೆ ಆಹಾರ ಪೊಟ್ಟಣ , ಮಾಸ್ಕ್ , ಗ್ಲಾವ್ಸ್ , ಸೋಪ್ , ಕಾಪ್ಲೇಟ್‍ಗಳನ್ನು ವಿತರಿಸಲಾಯಿತು.. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕರ್ತೆಯರಾದ ಕುಮಾರಿ ಐರಲ್, ಕುಮಾರಿ ರಂಜಿನಿ , ಮುಮ್ತಾಜ್ , ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು


 

 

 

 

 

 

 

 

 

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by