ದಿನಾಂಕ 9.09.2021 ರಂದು ಕಾರ್ಮಿಕ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದಲ್ಲಿ ಅಸಂಘಟಿತ ಮಹಿಳಾ ಕಾರ್ಮಿಕರಾದ ಹೊಲಿಗೆ ವೃತ್ತಿ, ಗೃಹ ಕಾರ್ಮಿಕರು ಮೊದಲಾದವರನ್ನು ಗುರುತಿಸಿ ಇಲಾಖೆಯ ವತಿಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಹೋದಯ ಕೇಂದ್ರದ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ, ಸಂತ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯರಾದ ಭ| ವೀಣಾ ಹಾಗೂ ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ,ಕು| ಐರಲ್, ಕು|ರಂಜಿನಿ ಹಾಗೂ ಒಕ್ಕೂಟದ ಪದಾಥಿಕಾರಿಗಳಾದ ಶ್ರೀಮತಿ ಶೋಭಾ , ಕು| ಮುಮ್ತಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂಕನಾಡಿ, ಪೊರ್ಕೋಡಿ, ಗೋರಿಗುಡ್ಡ ಇಲ್ಲಿನ ಫಲಾನುಭವಿಗಳಿಗೆ ಸ್ಯಾನಿಟೈಸ್ಸರ್, ಮಾಸ್ಕ್, ಹ್ಯಾಂಡ್‌ವಾಶ್, ಸೋಪ್, ಸ್ಯಾನಿಟರಿ ನ್ಯಾಪ್ಕಿನ್ ಒಳಗೊಂಡಿರುವ ಸುರಕ್ಷಾ ಕಿಟನ್ನು ವಿತರಿಸಲಾಯಿತು. ಸುಮಾರು 240 ಮಹಿಳಾ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.