ದಿನಾಂಕ 1.04.2023 ಮತ್ತು 3.04.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ವತಿಯಿಂದ ಸಂತ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಂದೂರು ಇಲ್ಲಿನ 4ನೇ ತರಗತಿಯಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಎರಡು ದಿನದ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು. ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಸಹೋದಯ ಸಂಸ್ಥೆಯ ಶ್ರೀಮತಿ ನಳಿನಿ ಹಾಗೂ ಶ್ರೀಮತಿ ರೆನಿಲ್ಲಾ ರೋಶ್ನಿ ಇವರು ತಮ್ಮ ಪರಿಚಯವನ್ನು ಮಾಡಿ ತದನಂತರ ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸಿ ತಮ್ಮ ತಮ್ಮ ಸ್ವ ಪರಿಚಯವನ್ನು ಮಾಡಿ ಸಣ್ಣ ಆಟದೊಂದಿಗೆ ವ್ಯಾಯಾಮ ಮಾಡಿಸಲಾಯಿತು. ನಂತರ ತರಗತಿವಾರು ಮಕ್ಕಳನ್ನು ನಾಲ್ಕು ಗುಂಪುಗಳಾನ್ನಾಗಿಸಿ ಪ್ರತಿ ಗುಂಪಿನಲ್ಲೂ ಒಂದು ನಾಯಕ/ ನಾಯಕಿಯನ್ನು ಆಯ್ಕೆ ನಡೆಸಿ ಗುಂಪಿಗೆ ಅರ್ಥಭರಿತವಾದ ಹೆಸರನ್ನು ನೀಡಿ ಆ ಹೆಸರಿನ ಅರ್ಥವನ್ನು 4,5 ವಾಕ್ಯಗಳಲ್ಲಿ ವ್ಯಕ್ತಪಡಿಸುವಂತೆ ತಿಳಿಸಲಾಯಿತು. ನಂತರ ಶ್ರೀಮತಿ ನಳಿನಿ ಇವರು ಉತ್ತಮ ಮೌಲ್ಯಗಳ ಬಗ್ಗೆ ಹಾಗೂ ಶ್ರೀಮತಿ ಶೋಭಾ ಇವರು ಆರೋಗ್ಯ ಮತ್ತು ಸ್ವಚ್ಚತೆ ಬಗ್ಗೆ ಮಾಹಿತಿ ನೀಡಿ ಅಂದಿನ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು. ಶಿಬಿರದ ಎರಡನೇ ದಿನವನ್ನು ದೇವರ ಸ್ಮರಣೆಯೊಂದಿಗೆ ಆರಂಭಿಸಲಾಯಿತು. ನಂತರ ಮೊಬೈಲ್ ಬಳಕೆಯ ಉಪಯೋಗ ಮತ್ತು ದುರುಪಯೋಗದ ಬಗ್ಗೆ ಮಾಹಿತಿ ನೀಡಿ ಕಲಿಕೆಗೆ ಪೂರಕವಾದ ಮೌಲ್ಯಾಧಾರಿತ ಆಟಗಳನ್ನು ಆಡಿಸಿ ಅಂದಿನ ಸಮಾರೋಪ ಕಾರ್ಯಕ್ರಮಕ್ಕೆ ಮಕ್ಕಳಿಂದ ಸ್ವಾಗತ, ನೃತ್ಯ, ಕಿರುನಾಟಕ, ಧನ್ಯವಾದ ಮೊದಲಾದವುಳನ್ನು ತಯಾರಿಸಲಾಯಿತು. ಮಧ್ಯಾಹ್ನದ ನಂತರ ಶಿಬಿರದ ಸಮರೋಪ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಹೋದಯ ಸಂಸ್ಥೆಯ ಸಂಯೋಜಕರಾದ ಭ|ಲೀನಾ ಡಿ’ಕೋಸ್ಟ ಇವರು ಸಮಯದ ಪರಿಪಾಲನೆ ಕುರಿತು ಯಾವ ರೀತಿ ನಾವು ಸಮಯವನ್ನು ಸದುಪಯೋಗ ಪಡಿಸಿ ಜೀವನದ ಯಶಸ್ಸನ್ನು ಕಾಣಬಹುದು ಹಾಗೂ ತಮ್ಮ ಮನೆಗಳಲ್ಲಿ ಹೆತ್ತವರು, ಹಿರಿಯರು ಹೇಳಿದ ಮಾತುಗಳನ್ನು ಕೇಳುವುದು, ಅವರಿಗೆ ಗೌರವವನ್ನು ನೀಡುವುದರ ಬಗ್ಗೆ ಮಾಹಿತಿ ನೀಡಿದರು. ಭ| ನ್ಯಾನ್ಸಿ (ಶಾಲಾ ಮುಖ್ಯೋಪಾಧ್ಯಯರು) ವಿದ್ಯಾರ್ಥಿಗಳನ್ನು ಉದ್ದೇಶಿ ಈ ಎರಡು ದಿನದ ಶಿಬಿರದಿಂದ ಪಡೆದಂತ ಮಾಹಿತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಉತ್ತಮ ಪ್ರಜೆಗಳಾಗಿ ಬಾಳಿರೆಂದು ಶುಭಹಾರೈಸಿದರು. ಶಿಕ್ಷಕ ವೃಂದ ಹಾಗೂ ಸಹೋದಯ ಸಂಸ್ಥೆಯ ಸಿಬ್ಬಂದಿ ಕು| ರಂಜಿನಿ ಮೋದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮವದ ಕೊನೆಯ ಹಂತದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಶಿಕ್ಷಕ ವೃಂದದ ಧನ್ಯವಾದದೊಂದಿಗೆ ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by