ದಿನಾಂಕ 13.04.2023 ಮತ್ತು 15.04.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ವತಿಯಿಂದ ಅಂಬೇಡ್ಕರ್ ನಗರ ಹಾಗೂ ಕೆಂಜಾರು ಪರಿಸರದ ಮಕ್ಕಳಿಗೆ ಎರಡು ದಿನದ ಬೇಸಿಗೆ ಶಿಬಿರವನ್ನು ಪೋರ್ಕೋಡಿ ಸಮುದಾಯ ಭವನದಲ್ಲಿ ಏರ್ಪಡಿಸಲಾಯಿತು. ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಶಿಬಿರವನ್ನು ಆರಂಭಿಸಲಾಯಿತು. ನಂತರ ಸಹೋದಯ ಸಂಸ್ಥೆಯ ಪರಿಚರವನ್ನು ನೀಡುತ್ತಾ ಮಕ್ಕಳಿಗೆ ಕೆಲವೊಂದು ಉತ್ತಮ ಜೀವನದ ಮೌಲ್ಯಗಳ ಬಗ್ಗೆ ಕಾರ್ಯಕರ್ತೆ ಶ್ರೀಮತಿ ನಳಿನಿ ಇವರು ಮಾಹಿತಿ ನೀಡಿದರು. ತದನಂತರ ಮಕ್ಕಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ತಮ್ಮ ತಮ್ಮ ಪರಿಚಯವನ್ನು ಮಾಡಿ ವ್ಯಾಯಾಮದ ಮುಖಾಂತರ ಶಿಬಿರವನ್ನು ಮುಂದುವರಿಸಲಾಯಿತು. ಪ್ರತಿ ಗುಂಪಿನಲ್ಲೂ ಒಂದು ನಾಯಕ/ ನಾಯಕಿಯನ್ನು ಆಯ್ಕೆ ನಡೆಸಿ ಗುಂಪಿಗೆ ಅರ್ಥಭರಿತವಾದ ಹೆಸರನ್ನು ನೀಡಿ ಆ ಹೆಸರಿನ ಅರ್ಥವನ್ನು ತಮ್ಮ ಗುಂಪಿನಲ್ಲಿ ಚರ್ಚಿಸಿ 4,5 ವಾಕ್ಯಗಳಲ್ಲಿ ವ್ಯಕ್ತಪಡಿಸುವಂತೆ ತಿಳಿಸಲಾಯಿತು. ಆರೋಗ್ಯ ಮತ್ತು ದೈನಂದಿನ ಸ್ವಚ್ಛತೆಯ ಕುರಿತು ಗುಂಪು ಚಟುವಟಿಕೆಗಳನ್ನು ನೀಡಲಾಯಿತು. ರೋಶನಿ ನಿಲ ಇಲ್ಲಿನ ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿನಿಯರು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ನಡೆಸಿದರು.
ಶಿಬಿರದ 2 ನೇ ದಿನದಂದು ಶ್ರೀಮತಿ ನಿರ್ಮಲ ( ದ.ಕ.ಜಿ.ಪಂ ಶಾಲೆಯ ಶಿಕ್ಷಕಿ) ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ಲಿಂಗ ಮತ್ತು ತೃತೀಯ ಲಿಂಗಗಳ ಬಗ್ಗೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ತದನಂತರ ಸ್ರೀಮತಿ ನಳಿನಿ ಹಾಗೂ ಶ್ರೀಮತಿ ರೆನಿಲ್ಲಾ ರೋಶ್ನಿ ಇವರು ಪರಿಸರ, ಸ್ವಚ್ಛತೆ ಹಾಗೂ ಜೀವನದ ಗುರಿ-ಉದ್ದೇಶ ಮತ್ತು ಮೊಬೈಲ್ ಬಳಕೆಯಿಂದಾಗುವ ಉಪಯೋಗ ಮತ್ತು ದುರುಪಯೋಗಗಳ ಬಗ್ಗೆ ಮಾಹಿತಿ ನೀಡಿದರು.ಸಂತ ಅಲೋಶಿಯಸ್ ಕಾಲೇಜಿನ ಬಿ.ಎ ವಿದ್ಯಾರ್ಥಿಗಳು ಮಕ್ಕಳಿಗೆ ಏಕಾಗ್ರತೆಯುಳ್ಳ ಆಟಗಳನ್ನಾಡಿಸಿದರು ಹಾಗೂ ದಿನ ಪತ್ರಿಕೆಯನ್ನು ಬಳಸಿ ತಮ್ಮ ಗುಂಪಿಗೆ ನೀಡಿದ ವಿಷಯವನ್ನಾಧರಿಸಿ ತಮ್ಮ ಗುಂಪಿನಲ್ಲಿ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿ ವೇಷಭೂಷಣವನ್ನು ತಯಾರಿಸುವಂತೆ ಸೂಚಿಸಿ ಆ ವಿಷಯದ ಮೇರೆಗೆ ಒಂದು ಎರಡು ವ್ಯಕ್ತಗಳನ್ನಾಡಲು ತಿಳಿಸಲಾಯಿತು. ಸಮರೋಪ ಕಾರ್ಯಕ್ರಮದಲ್ಲಿ ಶ್ರೀಮತಿ ನಿರ್ಮಲ ಹಾಗೂ ಶ್ರೀಮತಿ ಚಿನ್ನಮ್ಮ ಆಶಾ ಕಾರ್ಯಕರ್ತೆ ಇವರು ಶಿಬಿರವನ್ನು ಉದ್ದೇಶಿಸಿ ಇದೇ ರೀತಿ ಮಕ್ಕಳ ಸಂಘವನ್ನು ರಚಿಸಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡಿ ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ಒದಗಿಸಿ ಹಾಗೂ ಇದೇ ರೀತಿ ಕಾರ್ಯಕ್ರಗಳನ್ನು ನಡೆಸುತ್ತಾ ಮಕ್ಕಳಿಗೆ ಉತ್ತಮವಾದ ಮಾಹಿತಿಗಳನ್ನು ನೀಡುತ್ತಾ ಸಹಕರಿಸಿರೆಂದು ಶುಭಹಾರೈಸಿದರು. ತದನಂತರ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಹೋದಯ ಬೆಥನಿ ಸೇವಾ ಕೇಂದ್ರದ ಸಿಬ್ಬಂದಿ ಕು| ರಂಜಿನಿ, ಹಿರಿಯರ ಮನೆ ಇಲ್ಲಿನ ಕಾರ್ಯಕರ್ತೆಯಾದ ಶ್ರೀಮತಿ ರೇಖಾ ಮೊದಲಾದವರು ಭಾಗವಹಿಸಿದ್ದರು. ಶ್ರೀಮತಿ ನಳಿನಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.