ದಿನಾಂಕ 28.07.2023 ರಂದು ರೋಜಾ ಮಿಸ್ತಿಕ ಪದವಿ ಪೂರ್ವ ಕಾಲೇಜು ಕಿನ್ನಿಕಂಬ್ಳ ಇಲ್ಲಿನ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು. ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾನವ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಎಂದರೇನು? ಯಾವೆಲ್ಲ ರೀತಿಯಲ್ಲಿ ಮಕ್ಕಳನ್ನು ಈ ಕಳ್ಳ ಸಾಗಾಣಿಕೆಗೆ ಒಳಪಡಿಸುತ್ತಾರೆ, ಇದರ ಪರಿಣಾಮ ಮತ್ತು ಜಾಗೃತಿಯ ಕುರಿತು ಮಾಹಿತಿ ನೀಡಿದರು ತಂದನಂತರ ಭ| ಫ್ರೀಡಾ ಎ.ಸಿ ಹಾಗೂ ಶ್ರೀಮತಿ ನಳಿನಿ ಇವರು ಮಾದಕ ವ್ಯಸನ ಹಾಗೂ ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಹೋದಯ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ರೋಶ್ನಿ , ಶಾಲಾ ಉಪಾದ್ಯಾಯರು ಭಾಗವಹಿಸಿದ್ದರು.