ದಿನಾಂಕ 30.07.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಅರೈಸ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಸಹೋದಯ ಸಭಾಂಗಣದಲ್ಲಿ ಗಿಡವನ್ನು ನೆಡುವುದರ ಮೂಲಕ ವನಮಹೋತ್ಸವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭ| ಸಂಧ್ಯಾ ಬಿ.ಎಸ್ ಮಾಹಾಮತೆಯ ಸಲಹೆದಾರು, ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಬೆಥನಿ ಪ್ರತಿಷ್ಠಾನದ ಸದಸ್ಯೆ, ಭ| ಶೈಲಾ ಬಿ.ಎಸ್ ಡೆಲಿಗೇಷನ್ ಸುಪೀರಿಯರ್, ಸೆಂಡ್ರಲ್ ಡೆಲಿಗೇಷನ್, ಭ| ಡೋನಾ ಬಿ.ಎಸ್ ಬೆಥನಿ ಕಾನ್ವಂಟಿನ ಮುಖ್ಯಸ್ಥರು, ಭ| ಲೀನಾ ಡಿ’ ಕೋಸ್ಟ, ಶ್ರೀಮತಿ ಪ್ರೇಮ ಎಲ್ ಒಕ್ಕೂಟದ ಅಧ್ಯಕ್ಷರು, ಕಾರ್ಯಕರ್ತೆಯರು, ಸಂಘದ ಸದಸ್ಯರ ಮೊದಲಾದವರು ಭಾಗವಹಿಸಿದ್ದರು. ಭ| ಸಂಧ್ಯಾ ಬಿ.ಎಸ್ ಇವರು “ಮನೆಗೊಂದು ಮರ ಊರಿಗೊಂದು ವನ” ಎಂಬ ಮಾತಿನ ಪ್ರಕಾರ ನಮ್ಮ ಸುತ್ತಮುತ್ತಲಿನ ಮರಗಳನ್ನು ಕಡಿಯದೆ ಅದನ್ನು ಬೆಳೆಸಿ ಪೋಷಿಸಿ ಪರಿಸರವನ್ನು ಉಳಿಸೋಣ ಎಂದು ಹಿತವಚನವನ್ನಾಡಿದರು.