ದಿನಾಂಕ 30.07.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಹಾಗೂ ಅರೈಸ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾನವ ತಡೆ ದಿನದ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಫಾದರ್ ಅನಿಲ್ ಡಿ’ಮೊಲ್ಲೊ ನಿರ್ದೇಶಕರು (ಫಾತಿಮ ರಿಟ್ರೀಟ್ ಹೌಸ್ ಜೆಪ್ಪು ) ಇವರು ಸಂಪನ್ಮೂ ವ್ಯಕ್ತಿಯಾಗಿ ಭಾಗವಹಿದಸಿ ಮಹಿಳೆಯರಿಗೆ ಈ ಕಳ್ಳ ಸಾಗಾಣಿಕೆ ಎಂದರೇನು? ಯಾವೆಲ್ಲ ರೀತಿಯಲ್ಲಿ ಸಾಗಾಣಿಕೆಯನ್ನು ನಡೆಸುತ್ತಾರೆ ಸಾಮಾನ್ಯವಾಗಿ ಯಾರೆಲ್ಲ ಸಾಗಾಣಿಕೆಗೆ ಗುರಿಯಾಗುತ್ತಾರೆ ಮತ್ತು ಇದರಿಂದ ನಾವು ಹೇಗೆ ಜಾಗೃತರಾಗಬೇಕೆಂಬುದರ ಕುರಿತು ಒಂದು ಸಣ್ಣ ಚಿತ್ರಣದ ಮೂಲಕ ಮಾಹಿತಿ ನೀಡಿದ್ದರು.