ವ್ಯಸನ ಮುಕ್ತ ಸಮಾಜ ( Anti Drug Month Sept 1-30) ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ, ಮಂಗಳೂರಿನ ಪರಿಸರಗಳಾದ ಸ್ಟೇಟ್ ಬ್ಯಾಂಕ್, ಹಂಪನ್‍ಕಟ್ಟ ಬಸ್ ನಿಲ್ದಾಣ, ಕ್ಲಾಕ್ ಟವರ್, ಠಾಗೋರ್ ಪಾರ್ಕ್ ಬೀದಿ ನಾಟಕದ ಮುಖಾಂತರ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಮಂಗಳೂರು ನಗರದ ಪ್ರಜೆಗಳಿಗೆ, ಯುವಕ - ಯುವತಿಯರಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ ವ್ಯಸನ ಜಾಗೃತಿ ಬೀದಿ ನಾಟಕವನ್ನು ಇಂದು 21 ಸೆಪ್ಟೆಂಬರ್ 2023 ಗುರುವಾರ ಅಪರಾಹ್ನ 2.00 ಗಂಟೆಯಿಂದ 4.30 ರವರೆಗೆ ಹಂಪನ್‍ಕಟ್ಟ ಬಸ್ ನಿಲ್ದಾಣ, ಕ್ಲಾಕ್ ಟವರ್, ಠಾಗೋರ್ ಪಾರ್ಕ್ ಈ ಮೂರು ಸ್ಥಳಗಳಲ್ಲಿ ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು - ಮಂಗಳೂರು, ಅರೈಝ್ ಫೌಂಡೇಶನ್ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ನೆರವೇರಿತು. ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಬಿ.ಎಸ್.ಡಬ್ಲ್ಯೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಬೀದಿ ನಾಟಕ ಹಾಗೂ ಬಿತ್ತಿ ಚಿತ್ರಗಳನ್ನು ಪ್ರದರ್ಶಿಸುತ್ತಾ ವ್ಯಸನದಿಂದ ಆಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ವಿನಿತಾ ರೈ ಸಮಾಜ ಕಾರ್ಯ ವಿಭಾಗದ ಹೆಚ್.ಒ.ಡಿ ಇವರು ಯುವ ಸಮಾಜದಲ್ಲಿರುವ ಪ್ರತಿಭೆ ಮತ್ತು ಹೊಸ-ಹೊಸ ಆಲೋಚನೆಗಳನ್ನು ಕುಂಠಿತಗೊಳಿಸುವ ಮಾದಕ ದ್ರವ್ಯ ಇದರಿಂದಾಗುತ್ತಿರುವ ಪರಿಣಾಗಳನ್ನು ಹಾಗೂ ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ. ಯುವ ಸಮಾಜ ಜಾಗೃತರಾದರೆ ದೇಶ ಜಾಗೃತವಾದಂತೆ ಎಂಬ ಪ್ರಸ್ತಾಪ ಮಾತಿನೊಂದಿಗೆ ಕಾರ್ಯಕ್ರವನ್ನು ಆರಂಭಿಸಿದರು. ತದನಂತರ ಕಾರ್ಯಕ್ರಮದಲ್ಲಿ ಬಿ.ಎಸ್.ಡಬ್ಲ್ಯೂ ಹಾಗೂ ಎಮ್ ಎಸ್ ಡಬ್ಲ್ಯೂ ಸಮಾಜ ಕಾರ್ಯವಿಭಾದ ವಿದ್ಯಾರ್ಥಿನಿಯರು, ಸಹೋದಯ ಬೆಥನಿ ಸೇವಾ ಕೇಂದ್ರದ ಸಿಬ್ಬಂದಿಗಳು, ಬೆಥನಿ ಮಹಿಳಾ ಒಕ್ಕೂಟದ ಸದಸ್ಯೆಯರು, ಪರಿಸರದ ಜನರು ಮೊದಲಾದವರು ಭಾಗವಹಿಸಿದ್ದರು. ಅಪರಾಹ್ನದ ಲಘು ಉಪಹಾರವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Addiction free society awareness was raised through street theatre held in the surroundings of Mangalore City.
Bethany Social Service Trust® Mangalore,Sahodaya Bethany Seva Kendra Bendur ,Mangalore in collaboration with Arise Foundation and School of Social Work Roshni Nilaya Mangalore, for addiction free society, “Anti drug month” 1-30 September 2023, and in support with Police commissioner for Mangalore for “Addiction free Mangalore”, organized street play today 21 September 2023 at 2pm in surrounding areas of Mangalore at State Bank Bus stand Humpankatta, Clock Tower, Tagore park.
Sr Leena Dcosta, coordinator of Sahodaya Bethany Seva Kendra Bendur welcomed everyone. Mrs Vineetha Rai The HOD of School of Roshni Nilaya of BSW gave a brief introduction of Anti Drug. Giving an invitation to the younger generation to say "No to drugs and yes to Life" through a street play by the BSW Students of School of Social work Roshni Nilaya, they raised awareness on combating drugs and its ill effects . Through slogans and postcards the public were made aware of the ill effects of drug use.
Sr Leena DCosta BS Coordinator Sahodaya