ದಿನಾಂಕ 30.07.2023 ರಂದು ಸಹೋದಯ ಬೆಥನಿ ಮಹಿಳಾ ಒಕ್ಕೂಟ ಮಹಾಸಭೆ ಹಾಗೂ ಆಟಿ ಕೂಟವನ್ನು ಸಹೋದಯ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೇವರ ಸ್ಮರಣೆಯೊಂದಿಗೆ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಭ| ಸಂಧ್ಯಾ ಬಿ.ಎಸ್ ಇವರು ಆಟಿ ತಿಂಗಳಲ್ಲಿ ಸಿಗುವಂತಹ ತಿಂಡಿ ತಿನಿಸುಗಳ ಬಗ್ಗೆ ಹಾಗೂ ಆಟಿ ತಿಂಗಳ ವಿಶೇಷತೆ ತಿಳಿಸಿದರು. ನಂತರ ಭ| ಶೈಲಾ ಬಿ.ಎಸ್ (ಡೆಲಿಗೇಷನ್ ಸುಪಿರೀಯರ್, ಸೆಂಟ್ರಲ್ ಡೆಲಿಗೇಷನ್) ಹಾಗೂ ಭ| ಡೋನಾ ಬಿ.ಎಸ್ (ಬೆಥನಿ ಕಾನ್ವೆಂಟಿನ ಮುಖ್ಯಸ್ಥರು) ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು.

ಆಟಿ ಕೂಟದ ಪ್ರಯುಕ್ತ ಸದಸ್ಯರಿಗೆ ಆಟೋಟ ಸ್ಫರ್ಧೆಯನನು ನಡೆಸಿ ಗೆದ್ದಂತಹ ಮಹಿಳೆಯರಿಗೆ ಬಹುಮಾನವನನು ವಿತರಿಸಲಾಯಿತು. ಹಾಡು , ಕಿರುನಾಟಕ ಹಾಗೂ ಆಟಿ ಕಳಂಜ ವೇಷವನ್ನು ಧರಿಸಿ ನೃತ್ಯದ ಮೂಲಕ ಸಾಂಸ್ಕ್ರತಿ ಕಾರ್ಯಕ್ರಮವನ್ನು ನಡೆಸಲಾಯಿತು. ಆಟಿ ವಿಶೇಷ ತಿಂಡಿ-ತಿನಿಸುಗಳನ್ನು ಸವಿದು ಶ್ರೀಮತಿ ಸುನೀತಾ ಒಕ್ಕೂಟದ ಕೋಶಾಧಿಕಾರಿ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

 

 

 

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by