ದಿನಾಂಕ 31.07.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಹಾಗೂ ಅರೈಝ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಪದುವ ಪ್ರೌಢ ಶಾಲೆ ಇಲ್ಲಿನ 8ನೇ ಮತ್ತು 9ನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಅಂಗವಾಗಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಕಳ್ಳ ಸಾಗಾಣಿಕೆ ಎಂದರೇನು? ಯಾವೆಲ್ಲ ರೀತಿಯಲ್ಲಿ ಮಕ್ಕಳನ್ನು ಈ ಸಾಗಾಣಿಕೆಗೆ ಒಳಪಡಿಸುತ್ತಾರೆ, ಇದರ ಪರಿಣಾಮ ಹಾಗೂ ನಾವು ಯಾವ ರೀತಿಯಲ್ಲಿ ಜಾಗರೂಕರಾಗಿರ ಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು. ತದನಂತರ ಈ ಮಾಹಿತಿಯ ಕುರಿತು ಮಕ್ಕಳೊಂದಿಗೆ ಚರ್ಚೆ ನಡೆಸಿ ಅವರ ಅನಿಸಿಕೆಯನ್ನು ಪಡೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಫ್ರಾನ್ಸಿಸ್ ಡಿ ಕುನ್ಹಾ, ಶಿಕ್ಷಕ ವೃಂದ, ಶ್ರೀಮತಿ ರೆನಿಲ್ಲಾ ರೋಶ್ನಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆ ಮೊದಲಾದವರು ಭಾಗವಹಿಸಿದ್ದರು.