ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ)ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಅರೈಸ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಇಂದು ವೃತ್ತಿಪರ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಆರು ತಿಂಗಳುಗಳ ಕಾಲ ಯಶಸ್ಸಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಿಲಾಗಿದ್ದು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದಂತಹ ಭ|ಶಾಂತಿಪ್ರಿಯ ಬಿ.ಎಸ್ (ಸಹಾಯಕ ಮಹಾಮಾತೆ,ಬೆಥನಿ ಪ್ರತಿಷ್ಠಾನದ ಕಾರ್ಯದರ್ಶಿ/ನಿರ್ದೇಶಕರು), ಫಾದರ್ ಜಾನ್ ಡಿ ಸೋಜಾ ಎಸ್.ಜೆ ( ನಿದೇರ್ಶಕರು, ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ) ಜೋಸಲಿನ್ ( ಫ್ಯಾಶನ್ ಡಿಸೈನರ್ ತರಬೇತಿ ಶಿಕ್ಷಕಿ, ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ) ಶ್ರೀಮತಿ ಸುಕನ್ಯಾ (ಹೊಲಿಗೆ ತರಬೇತಿ ಶಿಕ್ಷಕಿ) ಮೊದಲಾದವರು ಉಪಸ್ಥಿತರಿದ್ದರು. ಭ| ಲೀನಾ ಡಿ’ಕೋಸ್ಟ ಬಿ.ಎಸ್ ಇವರು ಬಂದಂತ ಅತಿಥಿ ಗಣ್ಯರನ್ನು ಸ್ವಾಗತಿಸಿ ತದನಂತರ ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ ಫಾ| ಜಾನ್ ಡಿ ಸೋಜಾ ಇವರು ದೇವರ ಕೃಪಾವರಗಳನ್ನು ಬೇಡುತ್ತಾ ಹೊಲಿಗೆ ತರಬೇತಿ ತರಗತಿಯನ್ನು ಆರ್ಶಿವಾದಿಸಿದರು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳೆಯರು ವೃತ್ತಿಪರ ಶಿಕ್ಷಣದಲ್ಲಿ ಪರಿಣತಿ ಹೊಂದಿ ಇನ್ನೊಬ್ಬ ಮಹಿಳೆಗೆ ನೀವು ಸ್ಫೂರ್ತಿಯಾಗಿರ ಬೇಕು. ಮಹಿಳೆÉಂದಿಗೂ ನಿಂತ ನೀರಾಗಬಾರದು ಹೊಲಿಗೆ ವೃತ್ತಿ ಕುಂಠಿತಗೊಂಡರು ತಾನು ಇನ್ನೊಂದು ವೃತ್ತಿಯನ್ನು ಆಯ್ಕೆ ಮಾಡಿ ಮುನ್ನುಗುತ್ತಿರಬೇಕು.ತಾವು ಪಡೆದುಕೊಳ್ಳುವ ಪ್ರಮಾಣ ಪತ್ರಕ್ಕೆ ಅದರದೇ ಆದ ಪ್ರಮುಖ್ಯತೆ ಇದರಿಂದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಮುಕ್ತಾ ಅವಕಾಶವಿದೆ ಹಾಗೂ ತಮ್ಮ ಸಂಸ್ಥೆಯಲ್ಲಿ ನಡೆಸುತ್ತಿರುವ ವೃತ್ತಿಪರ ಶಿಕ್ಷಣ ತರಬೇತಿಯಲ್ಲೂ ತಾವು ತರಬೇತಿಯನ್ನು ಪಡೆಯಬಹುದೆಂದು ಎಂಬುದನ್ನು ತಿಳಿಸುತ್ತಾ ಶುಭ ಹಾರೈಸಿದರು. ನಂತರ ಜೋಸಲಿನ್ ಇವರು ಅಲೋಶಿಯಸ್ ಕೈಗಾರಿಕ ತರಬೇತಿ ಕೇಂದ್ರದಲ್ಲಿ ನಡೆಸುತ್ತಿರುವ ಹೊಲಿಗೆ, ಫ್ಯಾಶನ್ ಡಿಸೈನ್, ಎಂಬ್ರಾಡೈರಿ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಭ| ಶಾಂತಿಪ್ರಿಯ ಬಿ.ಎಸ್ ಇವರು ಮಹಿಳೆಯರು ಸ್ವ-ಉದ್ಯೋಗಿಯಾಗಿ ಹೊರಹೊಮ್ಮಿ ತಮ್ಮಂತೆಯೇ ಇತರರಿಗೂ ತಾವು ಕಲಿತ ವಿದ್ಯೆಯನ್ನು ಹಂಚಿ ನಾನು ಎಂಬ ಸ್ವಾರ್ಥವನ್ನು ಮರೆತು ಎಲ್ಲರೂ ಒಂದೇ ಎಂಬ ಮನೋಭಾವವನ್ನಿಟ್ಟು ಕೆಲಸ ಮಾಡುತ್ತಾ ಇನ್ನು ಉತ್ತಮ ಹೊಲಿಗೆಯನ್ನು ಕಲಿತು ಪರಿಣತಿಯನ್ನು ಹೊಂದಿ ಹಾಗೂ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಿರಿ ಎಂದು ಹಾರೈಸಿದರು. ನಂತರ ಆರು ತಿಂಗಳ ಹೊಲಿಗೆ ತರಬೇತಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು.
ಹೊಲಿಗೆ ತರಬೇತಿಯ ವಿದ್ಯಾರ್ಥಿಗಳಿಂದ ಹಾಗೂ ಸಂತ ಸೆಬಾಸ್ಟಿಯನ್ ಮಕ್ಕಳಿಂದ ನೃತ್ಯ, ಹಾಡು ಮೊದಲಾದ ಮನೋರಂಜನ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಮೀರಾ ವಾಸ್ ( ಹೊಲಿಗೆ ತರಬೇತಿ ವಿದ್ಯಾರ್ಥಿ) ಶ್ರೀಮತಿ ಶೋಭಾ( ಹೊಲಿಗೆ ತರಬೇತಿ ವಿದ್ಯಾರ್ಥಿ) ಇವರ ಧನ್ಯವಾದದೊಂದಿಗೆ ಲಘ ಉಪಹಾರವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.