ದಿನಾಂಕ 08.11.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಕರಂಬಾರು ಅಂಗನವಾಡಿ, ಪಟ್ಟಣ ಪಂಚಾಯತ್ ಸಭಾ ಭವನ ,ಬಜಪೆ , ತತ್ತಾಡಿ ಕಾನ ಅಂಗನವಾಡಿ, ಸಭಾ ಭವನ ಅಂಬೇಡ್ಕರ್ ನಗರ ಹಾಗೂ ಸಮುದಾಯ ಭವನ,ಪೊರ್ಕೋಡಿ ಪರಿಸರದಲ್ಲಿ ಕಾವಲು (ವಿಜೆಲೆಂಟ್ ಕಮಿಟಿ) ಸಮಿತಿಯನ್ನು ರಚನೆ ಮಾಡಲಾಯಿತು. ದೇವರ ಸ್ಮರಣೆಯೊಂದಿಗೆ ಅಂದಿನ ಸಭೆಯನ್ನು ಆರಂಭಿಸಲಾಯಿತು. ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಎಲ್ಲರನ್ನು ಸ್ವಾಗತಿಸಿದರು. ತದನಂತರ ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ನಡೆಸಲಾಗುತ್ತಿರುವ ಅನೇಕ ಕಾರ್ಯಕ್ರಮ ಹಾಗೂ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ತಿಳಿಸಿ. ನಂತರ ಕಾವಲು ಸಮಿತಿ (ವಿಜಿಲೆಂಟ್ ಕಮಿಟಿ) ಅಂದರೆ ಹಾಗೂ ಇದರ ಪ್ರಯೋಜನ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಒಂದೇ ಸಮಿತಿಯ ಮೂಲಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ದ.ಕ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಸಲುವಾಗಿ ಕಾವಲು ಸಮಿತಿಗಳನ್ನು ರಚನೆಮಾಡಿ ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಟ ತಡೆ, ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ನಿóಷೇಧ ಮತ್ತು ಸಮಗ್ರ ಮಕ್ಕಳ ರಕ್ಷಣೆಗಾಗಿ ಆಯಾಯ ಪಂಚಾಯತಿನ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಯಾ ಪರಿಸರದ ಶಾಲಾ ಮುಖ್ಯೋಪಾಧ್ಯಾಯರು, ಇತರ ಸಂಘಟನೆಯ ಸದಸ್ಯರು, ಪೋಲೀಸ್ ಅಧಿಕಾರಿಗಳು, ಮಕ್ಕಳ ಪೋಷಕರು ಶಾಲಾ ಎಸ್.ಡಿ.ಎಂ.ಸಿ ಯ ಸದಸ್ಯರು ಈ ಸಮಿತಿಗೆ ಒಳಪಟ್ಟಿರುತ್ತಾರೆ. ಹಾಗೆಯೇ ಇದರ ಜವಾಬ್ದಾರಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು ಹಾಗೂ ಸಂಘವನ್ನು ಬಲಪಡಿಸುವ ಉದ್ದೇಶದಿಂದ ಪ್ರತಿ ತಿಂಗಳು ಸಭೆಯನ್ನು ನಡೆಸುವುದು, ಆಯಾ ಪರಿಸರದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಸಭೆಯಲ್ಲಿ ಚರ್ಚೆ ನಡೆಸಿ ಕಾರ್ಯ ರೂಪಕ್ಕೆ ತರುವ ನಿರ್ಧಾರವನ್ನು ಕೈಗೊಳ್ಳುವುದು, ಮಕ್ಕಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬೇಕು, ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟುವ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಕೆಲವೊಂದು ಮಾಹಿತಿ ಕಾರ್ಯಕ್ರಮಗಳನ್ನು ಸಮಿತಿಯ ನೀಡುವುದು,ಸರಕಾರದಿಂದ ಸಿಗುವಂತಹ ಕೆಲವೊಂದು ಸೌಲಭ್ಯ ಜನರಿಗೆ ಸಿಗದೆ ಇರುವಂತಹ ಸಮಯದಲ್ಲಿ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಒದಗಿಸಿಕೊಡುವುದು. ಈ ಮೊದಲಾದವುಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಅಂಗನವಾಡಿ ಶಿಕ್ಷಕಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ದಾದಿ, ಸ್ತ್ರೀ ಸಂಘಟನೆಯ ಅಧ್ಯಕ್ಷೆ, ಪಂಚಾಯತ್ತಿನ ಸದಸ್ಯರು, ಮಕ್ಕಳ ಪೋಷಕರು ಹಾಗೂ ಸಹೋದಯ ಸಂಸ್ಥೆಯ ಸಿಬ್ಬಂದಿಗಳು ಮೊದಲಾದವರು ಭಾಗವಹಿಸಿದ್ದರು.

 

Ambedkar Nagara

 

Bajape

 

Karambaru

 

Karambaru

 

Samudaya Bhavana Porkodi

 

Thattadi Kana

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by