ದಿನಾಂಕ 17.11.2023 ರಂದು ಸರಕಾರಿ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಮಕ್ಕಳ ಮಾಸೋತ್ಸವ ಸಮಿತಿ ಪಡಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ನೇತ್ರಾವತಿ, ಮಕ್ಕಳ ರಕ್ಷಣಾ ಘಟಕ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮತ್ತು ಸಹೋದಯ ಬೆಥನಿ ಸೇವಾ ಕೇಂದ್ರ ಮಂಗಳೂರು ದ.ಕ ಜಿಲ್ಲೆ ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ 2023 ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಲಾಯಿತು. ಕಾರ್ಯಕ್ರಮವನ್ನು ಆಶಾ ಗೀತೆಯೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾದ ಶ್ರೀಮತಿ ಶೋಭಾ ಬಿ.ಜಿ ( ಜಿಲ್ಲಾ ಕಾನೂನು ಪ್ರಧಿಕಾರದ ಕಾರ್ಯದರ್ಶಿ ಮತ್ತು ನ್ಯಾಯಧೀಶರು)ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಡೆಯಲು ಮುಂದಾಗಬೇಕು ಹಾಗೇಯೇ ಮಕ್ಕಳಿಗೋಸ್ಕರ ಆಯೋಜಿಸಿದ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಕೈಗೂಡಲೆಂದು ಶುಭಹಾರೈಸಿದರು. ತದನಂತರ ರಶ್ಮಿ ಕೆ.ಎಂ (ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ಮಂಗಳೂರು) ಇವರು ಮಕ್ಕಳ ದಿನಾಚರಣೆಯ ಶುಭ ಕೋರಿ ಮಕ್ಕಳ ಹಕ್ಕುಗಳು ಮಕ್ಕಳಿಗೆ ಅಗತ್ಯವಾಗಿದ್ದು ಇದನ್ನು ತಮ್ಮ ಮನೆಯ ಹೊರಗಡೆ ಮಾತ್ರವಲ್ಲದೆ ಮನೆಯಲ್ಲಿಯೂ ಕೂಡ ಅಭಿವೃದ್ಧಿ ಪಡಿಸಲು ಪ್ರಾಮುಖ್ಯತೆಯನ್ನು ಕೊಡಬೇಕೆಂಬುದರ ಕುರಿತು ಹಾಗೂ ಮೊಬೈಲ್ ಬಳಕೆಯ ದುಷ್ಪಾರಿಣಾಮದ ಬಗ್ಗೆ ತಿಳಿಸಿದರು. ಭ| ಲೀನಾ ಡಿ ಕೋಸ್ಟ (ಸಂಯೋಜಕರು ಸಹೋದಯ ಬೆಥನಿ ಸೇವಾ ಕೇಂದ್ರ ಮಂಗಳೂರು) ಇವರು ಮಕ್ಕಳ ಸಿಗಬೇಕಾದ ಹಕ್ಕುಗಳು ಮತ್ತು ಸಂರಕ್ಷಣೆ ಅದೇ ರೀತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಿಗಬೇಕಾದ ಪ್ರಾಮುಖ್ಯತೆಗಳು, ಪ್ರೋತ್ಸಾಹವನ್ನು ನಮ್ಮ ಸಂಘ ಸಂಸ್ಥೆಗಳ ಮೂಲಕ ಹಲವಾರು ಅರಿವಿನ ಕಾರ್ಯಕ್ರಮ ಮಾಡುತ್ತಾ ಇದ್ದೇವೆ ಹಾಗಯೇ ನಾವೆಲ್ಲರೂ ಒಟ್ಟು ಸೇರಿ ಈ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಯಶಸ್ಸಗಲೆಂದು ಶುಭಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ದಿನೇಶ್ ಕುಮಾರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಅಪರಾಧಿ ಮತ್ತು ಸಂಚಾರಿ ಇಲಾಖೆ) , ಶ್ರೀ ದಿವಾಕರ್ ಶೆಟ್ಟಿ ( ಶಿಕ್ಷಕ- ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮಂಗಳೂರು) ಶ್ರೀಮತಿ ಆಶಾ ನಾಗರಾಜ್ ವಲಯ ಅಧ್ಯಕ್ಷರು - ಲಯನ್ಸ್ ಕ್ಲಬ್ ಮಂಗಳೂರು, ಭ| ಲೀನಾ ಡಿ ಕೋಸ್ಟ ಸಂಯೋಜಕರು ಸಹೋದಯ ಬೆಥನಿ ಸೇವಾ ಕೇಂದ್ರ ಮಂಗಳೂರು, ಶ್ರೀ ರೆನ್ನಿ ಡಿ ಸೋಜಾ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪಡಿ ಸಂಸ್ಥೆ ಬೆಂದೂರು ಮಂಗಳೂರು, ಹಿಲ್ಡಾರಾಯಪ್ಪನ್ ( ಪ್ರಜ್ಞಾ ಸಲಹಾ ಕೇಂದ್ರದ ಮುಖ್ಯಸ್ಥರು) ಶ್ರೀಮತಿ ಕಸ್ತೂರಿ ಬಾಲ ನ್ಯಾಯ ಮಂಡಳಿ ಸಮಿತಿಯ ಸದಸ್ಯೆ, ಶ್ರೀಮತಿ ನಯನ ರೈ ಅಧ್ಯಕ್ಷೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ, ಕು| ನಂದಾ ಪಾಯಿಸ್ ಮಕ್ಕಳ ಹಕ್ಕುಗಳ ಸಂಚಾಲಕರು , ಮಾಸೋತ್ಸವ ಸಮಿತಿ 2023 ದ.ಕ.ಜಿಲ್ಲೆ, ಶ್ರೀ ಪ್ರವೀಣ್ ಪುತ್ತೂರು ಎಸ್.ಡಿ.ಎಂ.ಸಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ರಾಜೇಶ್ವರಿ ಪುತ್ತೂರು ( ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಕೋಶಾಧಿಕಾರಿ) ಸ್ವಾಗತ ಶ್ರೀಮತಿ ಉಷಾ ನಾಯ್ಕ್ , ಶ್ರೀಮತಿ ಆಶಾ ಸುವರ್ಣ ಇವರ ಧನ್ಯವಾದದೊಂದಿಗೆ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆಯನ್ನು ನಡೆಸಿ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.