ದಿನಾಂಕ 16.11.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಇವರ ಜಂಟಿ ಆಶ್ರಯದಲ್ಲಿ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆ ಬಜಪೆ ಇಲ್ಲಿ 5ನೇ,6ನೇ ಮತ್ತು 7ನೇ ತರಗತಿ ಮಕ್ಕಳಿಗೆ ಕಸ ನಿರ್ವಾಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಗೀತಾ ಸೂರ್ಯ (ಎ.ಪಿ.ಡಿ ಪೌಂಡೇಷನ್ ನ ಮುಖ್ಯಸ್ಥೆ) ಇವರು ಕಸ ವಿಂಗಡೆಯ ಹಾಗೂ ಅಪಾಯಕಾರಿ ಕಸಗಳಿಂದಾಗುವ ಪರಿಣಾಮದ ಕುರಿತು ಪ್ರಯೋಗಿಕವಾಗಿ ಮಾಹಿತಿ ನೀಡಿದರು. ತದನಂತರ ಶ್ರೀಮತಿ ಅಶ್ವಿನಿ ಭಟ್(ಪರಿಸರ ತಜ್ಞೆ) ಇವರು ತ್ಯಾಜ್ಯ ನಿರ್ವಹಣೆ ಹಾಗೂ ಕಾಂಪೋಸ್ಟ್ ಗೊಬ್ಬರದ ತಯಾರಿಕೆ ಹಾಗೂ ಇದರ ಪ್ರಯೋಜನದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಹೋದಯ ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ರೆನಿಲ್ಲಾ ರೋಶ್ನಿ, ಶ್ರೀಮತಿ ಡೆಲ್ಸಿ ಡಿ ಸೋಜಾ ( ಶಾಲಾ ಸಹಾಯಕ ಶಿಕ್ಷಕಿ), ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಹಾಗೂ ಮಂಗಳೂರು ವಿಶ್ವ ವಿದ್ಯಾ ನಿಲಯ ಕೊಣಾಜೆ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕು| ಅನುಷ್ಕಾ, ಭ| ಅಗ್ನೇಷಿಯಾ ಸ್ವಾಗತ, ನೀಲ್ ಇವರ ಧನ್ಯವಾದದೊಂದಿಗೆ ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.