ದಿನಾಂಕ 15.11.2023 ರಂದು ಬಾಳ ಗ್ರಾಮ ಪಂಚಾಯತ್‍ನಲ್ಲಿ ನಡೆದ ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾನವ ಕಳ್ಳಸಾಗಾಣಿಕೆ ತಡೆ ಮತ್ತು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಮಾಹಿತಿ ನೀಡಿದರು. .
ಕಾರ್ಯಕ್ರಮದಲ್ಲಿ ಬಾಳ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಶಂಕರ್ ಜೋಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ್ ವೆಂಕಟ್ ರಮಣ, ಬಾಳ ಪಂಚಾಯತ್‍ನ ಸದಸ್ಯರು, ಆಶಾ ಕಾರ್ಯಕರ್ತೆ ಹಾಗೂ ಆಯಾ ಪರಿಸರದ ಮಹಿಳೆಯರು ಮೊದಲಾದವರು ಭಾಗವಹಿಸಿದ್ದರು.