ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೊಶನಿ ನಿಲಯ ಮಂಗಳೂರು ಹಾಗೂ ವಿಶ್ವ ವಿದ್ಯಾನಿಲಯ ಮಂಗಳ ಗಂಗೋತ್ರಿ ಕೊಣಾಜೆ ಇವರ ಜಂಟಿ ಆಶ್ರಯದಲ್ಲಿ ಹಾಗೂ ಮಕ್ಕಳ ಮಾಸೋತ್ಸವ 2023-24 ನೇ ಸಾಲಿನ ಅಂಗವಾಗಿ ದಿನಾಂಕ 26.11.2023 ರಂದು ಪೊರ್ಕೋಡಿ ಸಮುದಾಯ ಭವನದಲ್ಲಿ ಮಾದಕ ವ್ಯಸನ ತಡೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಯಶಸ್ವಿನಿ ಸಂಘದ ಮಕ್ಕಳು ಮಾದಕ ವ್ಯಸನ ತಡೆ ಕುರಿತು ಕಿರು ನಾಟಕವನ್ನು ಪ್ರದರ್ಶನ ನೀಡುವ ಮೂಲಕ ಆರಂಭಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸೂರ್ಯ ನಾರಾಯಣ ಓಟೆಪಡ್ಪು (ಕೌಶಲ್ಯ ತರಬೇತಿ ದಾರರು ಮತ್ತು ಮನೋ ವೈದ್ಯಕೀಯ ಆಪ್ತ ಸಮಾಲೋಚಕರು) ಇವರು ವ್ಯಸನ ಎಂದರೇನು? ಅದು ಹೇಗೆ ಆರಂಭವಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆಯನ್ನು ನೀಡಿದರು. ಯಾವುದೇ ವ್ಯಸನವು ನಮ್ಮ ಮಾನಸಿಕ ಸಂತುಲನದÀ ಮೇಲೆ ನಿರ್ಧಾರಿತವಾಗುತ್ತದೆ. ನಾವು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮೀಕವಾಗಿ ಮತ್ತು ಸಮಾಜಿಕವಾಗಿ ಆರೋಗ್ಯವಾಗಿದ್ದರೆ ಈ ವ್ಯಸನವನ್ನು ತಡೆಯಬಹುದು. ಹಾಗೂ ವ್ಯಸನ ಮಾಡಿರುವ ವ್ಯಕ್ತಿಯನ್ನು ಪ್ರೀತಿಯಿಂದ ಮಾತನಾಡಿಸುವ ಮೂಲಕ ವ್ಯಸನದಿಂದ ಮುಕ್ತಗೊಳಿಸುವ ಸಾಧ್ಯತೆ ಇದೆ. ಹಾಗೆಯೇ ಈ ವ್ಯಸನಕ್ಕೆ ಒಳಗಾದವರನ್ನು ಸೂಕ್ತ ಚಿಕಿತ್ಸೆಯ ನೀಡಿ ಸುಧಾರಿಸಬಹುದೆಂಬುದರ ಮೂಲಕ ಮಾಹಿತಿಯನ್ನು ನೀಡಿದರು. ತದನಂತರ ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ, ಶ್ರೀಮತಿ ರೆನಿಲ್ಲಾ ರೋಶ್ನಿ, ಹಿರಿಯ ನಾಗರಿಕ ಮನೆಯ ಸಂಯೋಜಕಿಯಾದ ಶ್ರಿಮತಿ ರೇಖಾ, ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮ ಮೊದಲಾದವರು ಉಪಸ್ಥಿತರಿದ್ದರು. ಯಶಸ್ವಿನಿ ಮಕ್ಕಳ ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು.ಕಾರ್ಯಕ್ರಮದ ನಿರೂಪಣೆ ಕು| ಕಾವ್ಯ ಪ್ರಥಮ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ, ಕು| ಅನುಷ್ಕಾ ಪ್ರಥಮ ಬಿ.ಎಸ್.ಡಬ್ಲ್ಯೂ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕು|ಫಿದಾ, ಕು| ಲಕ್ಷ್ಮೀ, ಭ| ಅಗ್ನೇಷಿಯಾ, ನೀಲ್ ಪ್ರಥಮ ಬಿ.ಎಸ್.ಡಬ್ಲ್ಯೂ ಮೊದಲಾದವರು ಭಾಗವಹಿಸಿದರು.