ದಿನಾಂಕ 15.12.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಮೆಡಲಿನ್ ಹಿ.ಪ್ರಾ. ಶಾಲೆ ಮುಲ್ಕಿ ಇಲ್ಲಿನ 5ನೇ, 6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ರೆನಿಲ್ಲಾ ರೋಶ್ನಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆ, ಸಹೋದಯ ಬೆಥನಿ ಮಹಿಳಾ ಒಕ್ಕೂಟ ಕೋಶಾಧಿಕಾರಿಯಾದ ಶ್ರೀಮತಿ ಸುನೀತಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ , ಮಕ್ಕಳಿಗೆ ದೈಹಿಕವಾಗಿ , ಮಾನಸಿಕ, ಸಾಮಾಜಿಕ ರೀತಿಯಲ್ಲಿ ಅವರನ್ನು ಕುಗ್ಗಿಸಿ ಬಿಡುತ್ತದೆ ಎಂಬುದರ ಕುರಿತು ಹಾಗೂ ಕೆಲವೊಂದು ಉದಾಹರಣೆಯ ಮುಖಾಂತರ ಮೊಬೈಲ್ ಬಳಕೆಯ ಉಪಯೋಗ ಹಾಗೂ ದುಷ್ಪರಿಣಾಗಳ ತಿಳಿಸಿದ್ದರು. ಸ್ವಾಗತ ಶ್ರೀಮತಿ ರೋಜಿ (ಶಿಕ್ಷಕಿ) ಧನ್ಯವಾದ ಭ| ಪ್ರೆಸ್ಸಿಲ್ಲಾ (ಮುಖ್ಯ ಶಿಕ್ಷಕರು) ಸಿಹಿ ತಿಂಡಿಯನ್ನು ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.