ದಿನಾಂಕ 11.01.2024 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು, ಅರೈಝ್ ಫೌಂಡೇಶನ್ ಹಾಗೂ ಬಾಳ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ಕಳವಾರು ಆಶ್ರಯ ಕಾಲೋಯಲ್ಲಿ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದೇವಾ ನಾ ಆರಾಧಿಪೆ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ ಬಿ.ಎಸ್, ಬಾಳ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಶಂಕರ್ ಜೋಗಿ( ಉದ್ಘಾಟಕರು) ಬಾಳ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ, ಶ್ರೀಮತಿ ಲೇಖನಾ (ಪಂಚಾಯತ್ ಸದಸ್ಯೆ), ಶಿವಜ್ಯೋತಿ ಕಳವಾರು ಮಹಿಳಾ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ದೇವಕಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ, ಹೊಲಿಗೆ ತರಬೇತಿ ಶಿಕ್ಷಕಿ ಶ್ರೀಮತಿ ಕುರೇಷ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಶಂಕರ್ ಜೋಗಿ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆಯನ್ನು ನೀಡಿ ಉತ್ತಮವಾದ ಕಾರ್ಯಕ್ರಮವನ್ನು ಕೈಗೊಂಡಿದ್ದೀರಿ ಈ ತರಬೇತಿಯಿಂದ ಎಲ್ಲ ಮಹಿಳೆಯರು ಪ್ರಯೋಜನವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಸುಧಾರಣೆ ಹೊಂದಿ ಎಂದು ಹಾಗೆಯೇ ತರಬೇತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ನಂತರ ಶ್ರೀಮತಿ ಲಕ್ಷ್ಮೀ ಇವರು ತರಬೇತಿಯನ್ನು ಉದ್ದೇಶಿಸಿ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶ ಇದನ್ನು ಎಲ್ಲರು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಂದು ಹಾರೈಸಿದರು. ತದನಂತ ಭ|ಲೀನಾ ಡಿ’ಕೋಸ್ಟ ಇವರು ಹೊಲಿಗೆ ತರಬೇತಿಯ ಪ್ರಯೋಜನ ಹಾಗೂ ತರಬೇತಿಯಿಂದ ಮಹಿಳೆಯರು ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿ ಸ್ವ-ಉದ್ಯೋಗಿಯಾಗಿ ಹೊರಹೊಮ್ಮಬಹುದು ಹಾಗೆಯೇ ಸಹೋದಯದ ವತಿಯಿಂದ ಬಜಪೆ, ಹೋಲಿ ಫ್ಯಾಮಿಲಿ, ಸಮುದಾ ಭವನ ಪೊರ್ಕೋಡಿ , ಸಹೋದಯ ಕೇಂದ್ರ ಮೊದಲಾದ ಪರಿಸರಗಳಲ್ಲಿ ತರಬೇತಿಯನ್ನು ನಡೆಸಿ ಇದೀಗ ಅನೇಕ ಮಹಿಳೆಯರು ಉತ್ತಮ ರೀತಿಯಲ್ಲಿ ಹೊಲಿಗೆಯನ್ನು ಕಲಿತು ಸ್ವ-ಉದ್ಯೋಗಿಗಳಾಗಿದ್ದರೆ ಮಹಿಳೆಯರಿಗೆ ತರಬೇತಿ ಮಾತ್ರವಲ್ಲದೆ ಹಲವು ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು ಅದರಂತೆಯೇ ತಾವು ಕೂಡ ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಇತರರಿಗೂ ಸ್ಫೂರ್ತಿಯಾಗ ಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯಾದ ಶ್ರೀಮತಿ ನಳಿನಿ, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ಕು| ಅನುಷ್ಕಾ, ನೀಲ್, ಭ| ಆಗ್ನೇಶಿಯಾ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಿಬ್ಬಂದಿ, ಶಿವ ಜ್ಯೋತಿ ಸಂಘದ ಸದಸ್ಯರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕು| ಅಮೃತಾ (ಸಹೋದಯ ಸಂಸ್ಥೆಯ ಕಾರ್ಯಕರ್ತೆ) ಸ್ವಾಗತ ಶ್ರೀಮತಿ ರೆನಿಲ್ಲಾ ರೋಶ್ನಿ (ಸಹೋದಯ ಸಂಸ್ಥೆಯ ಕಾರ್ಯಕರ್ತೆ) ಶ್ರೀಮತಿ ನಳಿನಾಕ್ಷಿ ಇವರ ಧನ್ಯವಾದದೊಂದಿಗೆ ಲಘು ಉಪಹಾರವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

 

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by