ದಿನಾಂಕ 16.01.2024 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು-ಮಂಗಳೂರು, ಜಿಲ್ಲಾ ಮಹಿಳಾ ವೇದಿಕೆ (ರಿ), ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದ.ಕ, ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ದ.ಕ, ಆರಕ್ಷಕ ಠಾಣೆ ಪಣಂಬೂರು, ಶಾಲಾಭಿವೃದ್ಧಿ ಹಾಗೂ ಮೇಲುಸ್ತೂವಾರಿ ಸಮಿತಿ ಸ.ಹಿ.ಪ್ರಾ.ಶಾಲೆ ಬೈಕಂಪಾಡಿ-ಮೀನಕಳಿಯಾ ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಮಸೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ ಮೀನಕಳಿಯ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಮೊದಲನೇಯದಾಗಿ ಶಾಲಾ ಆವರಣದಿಂದ ಶಾಲಾ ಸಮುದಾಯ ಭವನದವರೆಗೆ ಮೆರವಣಿಗೆಯ ಮೂಲಕ ಮಕ್ಕಳ ಹಕ್ಕುಗಳ ಘೋಷಣೆಯನ್ನು ನಡೆಸಲಾಯಿತು. ನಂತರ ಆಶಯ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆಂಭಿಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕು| ನಂದಾ ಪಾಯಿಸ್ (ಸಂಚಾಲಕರು ಮಕ್ಕಳ ಹಕ್ಕುಗಳ ಮಸೋತ್ಸವ ಸಮಿತಿ ದ.ಕ), ಉದ್ಘಾಟಕರು ಶ್ರೀ ಹರಿಶ್ಚಂದ್ರ ಕರ್ಕೆರ (ಉಪಾಧ್ಯಕ್ಷರು), ಶ್ರೀ ಅನಂತ ರಾಮ ಹೇರಳೆ (ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ) ಶ್ರೀಮತಿ ನಳಿನಾಕ್ಷಿ ಅಧ್ಯಕ್ಷರು ಎಸ್.ಡಿ.ಎಂ.ಸಿ ಸ.ಹಿ.ಪ್ರಾ.ಶಾಲೆ ಬೈಕಂಪಾಡಿ, ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ ಬಿ.ಎಸ್, ಶ್ರೀ ಜ್ಞಾನ ಶೇಖರ್ ಎಸ್ ಐ , ಶ್ರೀ ಪ್ರೇಮಾನಂದ್ (ಆರಕ್ಷಕ ಠಾಣೆ ಪಣಂಬೂರು), ಶ್ರೀಮತಿ ವೀಣಾ ಅಧ್ಯಕ್ಷರು ಎಸ್ ಡಿ ಎಂ ಸಿ ಪ್ರೌಢ ಶಾಲೆ ಬೈಕಂಪಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಜ್ಞಾನ ಶೇಖರ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಹಕ್ಕು, ಮಕ್ಕಳ ಕಾನೂನು, ಇತ್ತೀಚಿನ ದಿನಗಳಲ್ಲಿ ಅಥಿಕವಾಗುತ್ತಿರುವ ಅಪ್ರಾಪ್ತ ಮಕ್ಕಳ ಬಾಲ್ಯ ವಿವಾಹ ಇದರಿಂದ ಮಕ್ಕಳ ಮೇಲಾಗುವ ಪರಿಣಾಮ ಹಾಗೂ ಪೋಕ್ಸೋ ಕಾಯಿದೆಯಡಿಯಲ್ಲಿ ಬರುವಂತಹ ಸುರಕ್ಷತೆ ಮತ್ತು ಅಸುರಕ್ಷತೆ, ರಸ್ತೆ ಸುರಕ್ಷತೆ, ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಅನಂತ ರಾಮ ಹೇರಳೆ ಇವರು ಎರೆಹುಳ್ಳ ಗೊಬ್ಬರ ತಯಾರಿ ಕುರಿತು ಮಾಹಿತಿ ನೀಡಿದರು. ತದನಂತರ ಉದ್ಘಾಟಕ ಸ್ಥಾನವನ್ನು ವಹಿಸಿದಂತಹ ಶ್ರೀ ಹರಿಶ್ಚಂದ್ರ ಕರ್ಕೇರ ಇವರು ಮಕ್ಕಳ ಹಕ್ಕುಗಳು, ಮಕ್ಕಳ ಸಹಾಯವಾಣಿ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಆಗಮಿಸಿದಂತ ಭ| ಲೀನಾ ಡಿ’ಕೋಸ್ಟ ಇವರು ಮಕ್ಕಳಿಗೆ ಸಿಗಬೇಕಾದ ಹಕ್ಕುಗಳು ಮತ್ತು ರಕ್ಷಣೆ ಅದೇ ರೀತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಿಗಬೇಕಾದ ಪ್ರಾಮುಖ್ಯತೆಗಳು ಮತ್ತು ಪ್ರೋತ್ಸಾಹದ ಬಗ್ಗೆ ಮಾಹಿತಿ ನೀಡಿದರು ಅದರೊಂದಿಗೆ ನಮ್ಮ ಸಂಘ-ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವಾರು ಅರಿವಿನ ಕಾರ್ಯಕ್ರಮವನ್ನು ಮಾಡುತ್ತಾ ಇದ್ದೇವೆ ಅದೇ ರೀತಿಯಲ್ಲಿ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುದರ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡ ಬೇಕೆಂದು ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ಶಾಲಾ ಶಿಕ್ಷರ ವೃಂದ, ಮಕ್ಕಳ ಪೋಷಕರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕು| ಅಮೃತಾ (ಸಹೋದಯ ಸಂಸ್ಥೆಯ ಕಾರ್ಯಕರ್ತೆ) ಸ್ವಾಗತ ಶ್ರೀಗಂಗಾಧರ್(ಮುಖ್ಯೋಪಾಧ್ಯಾಯರು, ಜಿ.ಪ.ಸ.ಹಿ.ಪ್ರಾ.ಶಾಲೆ) ಶ್ರೀಮತಿ ನಳಿನಿ (ಸಹೋದಯ ಸಂಸ್ಥೆಯ ಕಾರ್ಯಕರ್ತೆ) ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.