ಶ್ರೀದೇವಿ ಸ್ನಾತಕೋತ್ತರ ಕಾಲೇಜು ಬಳ್ಳಾಲ್‍ಭಾಗ್, ಮಂಗಳೂರು, ಇಲ್ಲಿನ ಸಮಾಜ ಕಾರ್ಯ ವಿಭಾಗದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ದಿನಾಂಕ 06.02.2024 ರಂದು ಸಹೋದಯ ಬೆಥನಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕು| ಅಮೃತಾ ( ಕಾರ್ಯಕರ್ತೆ, ಸಹೋದಯ ಬೆಥನಿ ಸೇವಾ ಕೇಂದ್ರ) ಇವರು ಎಲ್ಲರನ್ನು ಸ್ವಾಗತಿಸಿದರು. ತದನಂತರ ಭ| ಲೀನಾ ಡಿ’ಕೋಸ್ಟ ( ಸಂಯೋಜಕರು, ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ) ಇವರು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರವು ನಡೆಸುತ್ತಿರು ಕಾರ್ಯ ಚಟುವಟಿಕೆಗಳ ಕುರಿತು ಹಾಗೂ ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಮಹಿಳೆಯರಿಗೆ ನಾಯಕತ್ವ, ಉಳಿತಾಯ, ಸ್ವ-ಉದ್ಯೋಗ ಮೊದಲಾದವುಗಳ ತರಬೇತಿಯನ್ನು ನೀಡಲಾಗುತ್ತಿದ್ದು ಹಾಗೂ ಮಕ್ಕಳ ವಿಕಾಸಕ್ಕಾಗಿ ಶಿಸ್ತು, ಸ್ವಚ್ಛತೆ, ಹದಿಹರೆಯದ ಸಮಸ್ಯೆಗಳು, ಸಹೋದಯ ಕಲಿಕಾ ಸ್ಪರ್ಧಾತ್ಮಕ ಪರೀಕ್ಷೆ, ಜೀವನ ಮೌಲ್ಯ ಮೊದಲಾದವುಗಳ ತರಬೇತಿಗಳನ್ನು ಮತ್ತು ನೊಂದ ಮಹಿಳೆಯರಿಗೆ, ಕುಟುಂಬಗಳಿಗೆ, ಮಕ್ಕಳಿಗೆ ಕಾನೂನು ರೀತಿಯಲ್ಲಿ ಪರಿಹಾರ ನೀಡುವುದರೊಂದಿಗೆ ಮಾನವ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ತಡೆ ಮೊದಲಾದವುಗಳ ಕುರಿತು ಸಂಸ್ಥೆಯು ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂಬುದನ್ನು ತಿಳಿಸಿದರು. ನಂತರ ಶ್ರೀಮತಿ ನಳಿನಿ( ಕಾರ್ಯಕರ್ತೆ) ಇವರು ಕಲಿಕೆಯಲ್ಲಿ ಹಿಂದುಳಿದ ಹಾಗೂ ಕೆಲವೊಂದು ಸಮಸ್ಯೆಗಳಿಗೆ ಒಳಪಟ್ಟ ಮಕ್ಕಳನ್ನು ಗುರುತಿಸಿ ಅವರಿಗೆ ಆಪ್ತಸಮಾಲೋಚನೆಯ ಮುಖಾಂತರ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಅವರಿಗೆ ಉತ್ತಮ ಸಲಹೆಯನ್ನು ನೀಡುವುದರ ಮೂಲಕ ಪರಿಹಾರ ಒದಗಿಸಿಕೊಡಲಾಗುವುದು ಎಂಬುದರ ಬಗ್ಗೆ ತಿಳಿಸಿದರು. ತದನಂತರ ನೀಡಿದಂತಹ ಮಾಹಿತಿಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಮೌಲ್ಯ ಮಾಪನವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಅಶ್ವಿನಿ ( ಶಿಕ್ಷಕರು, ಶ್ರೀದೇವಿ ಕಾಲೇಜು, ಬಳ್ಳಾಲ್ ಭಾಗ್, ಮಂಗಳೂರು) ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಮೊದಲಾದವರು ಭಾಗವಹಿಸಿದರು.