ದಿನಾಂಕ 27.01.2024 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು-ಮಂಗಳೂರು, ಜಿಲ್ಲಾ ಮಹಿಳಾ ವೇದಿಕೆ (ರಿ), ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದ.ಕ, ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾಭಿವೃದ್ಧಿ ಹಾಗೂ ಮೇಲುಸ್ತೂವಾರಿ ಸಮಿತಿ ದ.ಕ.ಜಿ.ಪÀ.ಹಿ.ಪ್ರಾ.ಶಾಲೆ ಕಾಟಿಪಳ್ಳ 6ನೇ ಬ್ಲಾಕ್ ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಮಸೋತ್ಸವ ಕಾರ್ಯಕ್ರಮದ ಅಂಗವಾಗಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಾಟಿಪಳ್ಳ (6ನೇ ಬ್ಲಾಕ್) ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಮಕ್ಕಳ ಹಕ್ಕುಗಳ ಘೋಷಣೆ ಹಾಗೂ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯ ಮೇಲೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಾ ಪಾಯಸ್
ಸಂಚಾಲಕರು ಮಕ್ಕಳ ಹಕ್ಕುಗಳ ಸಮಿತಿ)ಉದ್ಘಾಟಕರಾದ ಶ್ರೀಮತಿ ಸಂಶದ್ ಅಬುಬಕ್ಕರ್
( ಕಾರ್ಪೋರೇಟರ್) ಮುಖ್ಯ ಅತಿಥಿಗಳಾಗಿ ಭ| ಲೀನಾ ಡಿ’ಕೋಸ್ಟ ಬಿ.ಎಸ್( ಸಂಯೋಜಕರು, ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು ಮಂಗಳೂರು, ಶ್ರೀಮತಿ ಗಾಡ್ವಿನ್ ಲೀಮಾ( ಅಧ್ಯಕ್ಷರು ಎಸ್.ಡಿ.ಎಂ.ಸಿ), ಶಾಲಾ ವಿದ್ಯಾರ್ಥಿ ನಾಯಕ ಕು| ಗೋವಿಂದ ರಾಜ, ಶಾಲಾ ವಿರೋಧ ಪಕ್ಷದ ನಾಯಕಿ ಕು| ಸಿಂಚನ ಮೊದಲಾದವರು ಉಪಸ್ಥಿತರಿದ್ದರು. ನಂದಾ ಪಾಯಸ್ ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು ನಂತರ ಶ್ರೀಮತಿ ಸಂಶದ್ ಇವರು ಕಾರ್ಯಕ್ರಮವನ್ನು ಮಕ್ಕಳ ಹಕ್ಕುಗಳ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲಾಗುವ ಪರಿಣಾಮ ಹಾಗೂ ಇದರಿಂದ ಮಕ್ಕಳು ಯಾವ ರೀತಿಯಲ್ಲಿ ಜಾಗರುಕರಾಗಿರಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು ತದನಂತರ ಭ| ಲೀನಾ ಡಿ’ಕೋಸ್ಟ ಇವರು ಬಾಲ ಕಾರ್ಮಿಕತೆ ಎಂದರೇನು? ಈ ಕಾರ್ಮಿಕತೆಗೆ ಮಕ್ಕಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ, ಇದರಿಂದ ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತು ತಿಳಿಸಿದರು ನಂತರ ಮೊಬೈಲ್ ಬಳಕೆಯ ಪರಿಣಾಮ ಇದರಿಂದ ಮಕ್ಕಳ ಮನಸಿನ ಮೇಲೆ ಯಾವ ರೀತಿಯ ತೊಂದರೆಗಳಾಗುತ್ತವೆ ಇದರಿಂದ ಮಕ್ಕಳು ಹೇಗೆ ಪರಾಗಬಹುದು ಅಂದರೆ ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್‍ಗಳಲ್ಲಿ ಆಟವಾಡುವುದನ್ನು ಬಿಟ್ಟು ತಮ್ಮ ಕಲಿಕೆಯ ಕಡೆಗೆ ಹೆಚ್ಚಿನ ಗಮನಹರಿಸುವ ಮೂಲಕ ಉತ್ತಮ ವಿದ್ಯಾರ್ಥಿಯಾಗ ಬೇಕೆಂದು ಶುಭ ಹಾರೈಸಿದರು. ಹಾಗೂ ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ 5ನೇ,6ನೇ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಕಲಿಕಾ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಏರ್ಪಡಿಸಿರುವ ಕಲಿಕಾ ಸಾಮಥ್ರ್ಯ ಸ್ಫರ್ಧಾ ಪರೀಕ್ಷೆ ಕುರಿತು ತಿಳಿಸಿ ತಮ್ಮ ಶಾಲೆಯ ವಿದ್ಯಾರ್ಥಿಗಳಿ ಈ ಪರೀಕ್ಷೆಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರು, ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳ ಪೊಷಕರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕು| ಅಮೃತಾ( ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆ) ಶ್ರೀಮತಿ ರೀಟಾ ಡೇಸಾ(ಶಾಲಾ ಮುಖ್ಯೋಪಾಧ್ಯಾಯರು) ಎಲ್ಲರನ್ನು ಸ್ವಾಗತಿಸಿದರು. ಕು| ಗೋವಿಂದ ರಾಜ (ಶಾಲಾ ವಿದ್ಯಾರ್ಥಿ ನಾಯಕ ) ಇವರ ಧನ್ಯವಾದದೊಂದಿಗೆ ಲಘು ಉಪಹಾರವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.