ಸಹೋದಯ ಭೆಥನಿ ಸೇವಾ ಕೇಂದ್ರ (ರಿ) ಮಂಗಳೂರು ಜನವರಿ 1-2016ರಂದು ಛಾಯಿಯೊಂದಿಗೆ (CHAI) 2ನೇ ವರ್ಷದ ಅಕ್ಷಯ ಪ್ರೋಜೆಕ್ಟಿನ ಒಪ್ಪಂದ ಮಾಡಿಕೊಳ್ಳಲಾಯಿತು. ಅಕ್ಷಯ ಪ್ರೋಜೆಕ್ಟಿನ ಅಡಿಯಲ್ಲಿ ಸಹೋದಯ ಮಾಡಿದಂತಹ ಕೆಲಸಗಳು:
ಅಕ್ಷಯ ಸಂವಾದಗಳು : (ಮನೆ ಭೇಟಿ ನೀಡುವುದು, ಮಾಹಿತಿ ನೀಡುವುದು)
ಅಕ್ಷಯ ಸಂವಾದ ಅಕ್ಷಯ ಪ್ರೋಜೆಕ್ಟಿನಡಿಯಲ್ಲಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುಲು ಮನೆ ಮನೆಗಳಿಗೆಭೇಟಿ ನೀಡಿ ಜನರಲ್ಲಿ ಕ್ಷಯರೋಗದ ಬಗ್ಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂದು ತಿಳಿಸಿ ಕೊಡಲಾಯಿತು.
ಸಹೋದಯದ ಅಕ್ಷಯ ಸಂವಾದ ನಡೆಸಿದ ಸ್ಥಳಗಳು, ಹಳೆಯಂಗಡಿ, ಕೊಂಚಾರು, ಭಟ್ರಕೆರೆ, ಟಿ.ಸಿ.ರೊಡ್, ತೋಕ್ಕೊಟ್ಟು, ಕೃಷ್ಣನಗರ, ಮಿಲ್ಲತ್‍ನಗರ, ಮುಕ್ಕಚೇರಿ, ಇಂದಿರನಗರ, ಸುಭಾಶ್‍ನಗರ, ಸುವರ್ಣರೋಡ್, ಉಳ್ಳಾಲ, ಸಸಿಹಿತ್ಲು, ಪೋರ್ಕೊಡಿ, ಪಂಜಿಮುಗೆರ್, ಕೆರೆಕಾಡು, ಪಕ್ಷಿಕೆರೆ, ಹೈದರಾಲಿರಸ್ತೆ ಉಳ್ಳಾಲ, ಕೋಡಿ, ಬೀಚ್‍ರೋಡ್, ಪಟೇಲ್ ಕೌಂಪೌಂಡ್, ಉಳ್ಳಾಲ ದರ್ಗಾರೋಡ್.. ಅಕ್ಷಯ ಸಂವಾದದಡಿಯಲ್ಲಿ 3000 ಮನೆಭೇಟಿ ಮಾಡಿ 15,520 ಜನರಿಗೆ ಮಾಹಿತಿಯನ್ನು ನೀಡಲಾಯಿತು.