ದಿನಾಂಕ 25.01.2015 ರಂದು ಸಹೋದಯ ಬೆಥನಿ ಮಹಿಳಾ ಒಕ್ಕೂಟದ ವತಿಯಿಂದ ಭ| ಅಸುಂಪ್ತ.ಬಿ.ಎಸ್. ರವರಿಗೆ ಬೀಳ್ಗೊಡುಗೆ ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಸಹೋದಯದ ಸಂಯೋಜಕರಾದ ಭ| ಮಿಶೆಲ್ ರವರು ಭ| ಅಸುಂಪ್ತ ರವರ ಧಾರ್ಮಿಕ ಜೀವನ ಹಾಗೂ ಅವರ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು ಬಳಿಕ ವಲಯದ ಅಧ್ಯಕ್ಷರು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.ಭ| ಅಸುಂಪ್ತರವರು ಮಾತನಾಡಿ ನೀವು ಮಾಡುವ ಕೆಲಸವನ್ನು ಸಮಾಧಾನದಿಂದ ಒಳ್ಳೆಯ ರೀತಿಯಲ್ಲಿ ಮಾಡಬೇಕು. ನಿಮ್ಮ ವೈಯಕ್ತಿಕ ಜೀವನದಲ್ಲಿ ಸಿಹಿಕಹಿ ಅನುಭವಗಳನ್ನು ಹಂಚಿಕೊಂಡು ಬಾಳಬೇಕು ಎಂದು ಎಲ್ಲರನ್ನು ಹರಸಿದರು. ಒಕ್ಕೂಟದ ಪದಾಧಿಕಾರಿ ಹಾಗೂ ಸದಸ್ಯರು ಅವರವರ ಅನಿಸಿಕೆಗಳನ್ನು ತಿಳಿಸಿದರು.