ದಿನಾಂಕ 25.11.2019 ರಂದು ಬೆಥನಿ ಸಮಾಜ ಸೇವಾ ಪ್ರತಿಷ್ಠಾನ(ರಿ) ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಮಳವೂರು ಗ್ರಾಮ ಪಂಚಾಯತ್ ಮತ್ತು ಸಿಂಚನ ಮಹಿಳಾ ಮಂಡಳಿ ಪೊರ್ಕೋಡಿ ಇವರ ಜಂಟಿ ಆಶ್ರಯದಲ್ಲಿ ಸಮುದಾಯ ಭವನ ಪೊರ್ಕೋಡಿಯಲ್ಲಿ “ಮಹಿಳಾ ಶೋಷಣೆ ವಿರುದ್ಧ ದಿನ”ವನ್ನು ಆಚರಿಸಲಾಯಿತು. ಆ ಪ್ರಯುಕ್ತ ಜಾಗೃತ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಭ| ಇವ್ಲಿನ್ ಡಿ.ಎಚ್.ಎಮ್ ಸಹಾಯಕ ಪ್ರಾಧ್ಯಾಪಕರು, ಎಂ.ಎಸ್. ಡಬ್ಲ್ಯೂ ವಿಭಾಗದ ಮುಖ್ಯಸ್ಥೆ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯ ಮಂಗಳೂರು ಇವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆ ಯಾವ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾಳೆ, ಈ ಶೋಷಣೆಯನ್ನು ಯಾರು ನಡೆಸುತ್ತಾರೆ ಇದರಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಳವೂರು ಗ್ರಾ. ಪಂಚಾಯತ್‍ನ ಉಪಾಧ್ಯಾಕ್ಷೆ ಶ್ರೀಮತಿ ವನಜ ಬಿ.ಶೆಟ್ಟಿ, ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ಮಂಜುಳ , ಪಂಚಾಯತ್ ಸದಸ್ಯೆಯಾದ ಶ್ರೀಮತಿ ಮೀನಾಕ್ಷಿ, ಸಿಂಚನ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ನಳಿನಿ ಜಿ.ಶೆಟ್ಟಿ ಮೊದಲಾದ ಉಪಸ್ಥಿತರಿದ್ದರು. ಶಾಲಾ ಮಕ್ಕಳ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಕು| ರಂಜಿನಿ, ಶ್ರೀಮತಿ ಪೂರ್ಣಿಮ ರವರು ಎಲ್ಲಾರನ್ನು ಸ್ವಾಗತಿಸಿದರು. ಕು| ಮುಮ್ತಾಜ್ ಇವರ ಧನ್ಯವಾದ ಸಮರ್ಪಿಸಿದರು.