ದಿನಾಂಕ 26.11.2019 ರಂದು “ ಮಹಿಳಾ ಶೋಷಣೆಯ ವಿರುದ್ಧ ದಿನ” ದ ಪ್ರಯುಕ್ತ ಸಹೋದಯ ಬೆಥನಿ ಸೇವಾ ಕೇಂದ್ರ ಹಾಗೂ ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಸಂಯೋಗದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಯಾದ ಶ್ರೀಮತಿ ಶೋಭಾ ರವರು ನಾವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಏಕೆ ತೊಡೆದುಹಾಕಬೇಕು. ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯ (ವಿಎಡಬ್ಯ್ಲೂಜಿ) ಇಂದು ನಮ್ಮ ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾದ, ನಿರಂತರ ಮತ್ತು ವಿನಾಶಕಾರಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಅದರ ಸುತ್ತಮುತ್ತಲಿನ ನಿರ್ಭಯ, ಮೌನ, ಕಳಂಕ ಮತ್ತು ಅವಮಾನದಿಂದಾಗಿ ಹೆಚ್ಚಾಗಿ ವರದಿಯಾಗದೆ ಉಳಿದಿದ್ದು. ಇದರಿಂದ ಮಹಿಳೆಯು ಯಾವೆಲ್ಲ ತೊಂದರೆಗೆ ಒಳಗಾಗುತ್ತಿದ್ದಾಳೆ ಮತ್ತು ಇದರಿಂದ ಹೇಗೆ ಮುಕ್ತಗೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ’ಕೋಸ್ಟ, ಸಹೋದಯ ಬೆಥನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸಂಧ್ಯಾ, ಕಾರ್ಯಕರ್ತೆ ಶ್ರೀಮತಿ ನಳಿನಿ ಜಿ.ಶೆಟ್ಟಿ, ಕು| ದೀಪಿಕಾ, ಕು| ರಂಜಿನಿ ಮೊದಲಾದ ಉಪಸ್ಥಿತರಿದ್ದರು. ಶ್ರೀಮತಿ ಸುನೀತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಶೋಭಾರವರು ಧನ್ಯವಾದ ಸಮರ್ಪಿಸಿದರು.